ಜಿಲ್ಲೆ

ಜೈಂಟ್ಸ್ ಶಾಲೆ ಹಳೇ ವಿದ್ಯಾರ್ಥಿಗಳ ಸಭೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳ ಸಭೆ ಶಾಲೆಯ ಅಧ್ಯಕ್ಷ ಪರಶುರಾಮ ಊಟವಾಲೆ ಅವರ ನೇತೃತ್ವದಲ್ಲಿ ನಡೆಯಿತು.

ಶಾಲೆ ಖಜಾಂಚಿ ಸಿಎ ಅಮಿತ ಬಾಬಾಜಿ, ಹಳೇ ವಿದ್ಯಾರ್ಥಿಗಳ ಸಂಘ ರಚನೆಯ ಬಗ್ಗೆ ಮಾಹಿತಿ ನೀಡಿದರು. ಹಳೇ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವಾಗಿನ ಸವಿನೆನಪುಗಳನ್ನು ಹಾಗೂ ತಮ್ಮ ಜೀವನದ ಸಾಧನೆ ವಿವರಿಸಿದರು. ಸಂಘ ರಚನೆಗೆ ಆಸಕ್ತಿ ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಶಾಲೆ ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್. ರವಿ, ಕಾರ್ಯದರ್ಶಿ ವಿಜಯ ಕುಲಕರ್ಣಿ, ಸಂಸ್ಥೆಯ ಸದಸ್ಯ ವಸಂತ ನಾಯ್ಕ, ಆಡಳಿತಾಧಿಕಾರಿ ಉಮಾ ಪಾಟೀಲ್, ಪ್ರಾಂಶುಪಾಲ ಬಸವರಾಜ ಚಟ್ನಿ, ಸಮನ್ವಯ ಅಧಿಕಾರಿ ರೇಣುಕಾ ಕತಕಲಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.