ಜಿಲ್ಲೆ

ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ: ಆರು ಮಂದಿ ಬಂಧನ

ಶಿವಮೊಗ್ಗ: ಗಾಡಿಕೊಪ್ಪದ ಗೋಡೌನ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು, 3.70 ಲಕ್ಷ ರೂ. ಮೌಲ್ಯದ 168 ಕ್ವಿಂಟಾಲ್ ಅಕ್ಕಿ, ಎರಡು ಕ್ಯಾಂಟರ್, ಮೂರು ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ.

ಶಿವಮೊಗ್ಗ ಕಸ್ತೂರಬಾ ರಸ್ತೆಯ ಕಾರ್ತಿಕೇಯನ್ ಅಲಿಯಾಸ್ ಕಾರ್ತಿಕ್ (53), ಕಾಚಿನಕಟ್ಟೆಯ ಗೋಪಿ (23), ಸೀತಾರಾಮ (40), ಮತ್ತಿಘಟ್ಟದ ಕಾಂತರಾಜ (32), ನ್ಯೂಮಂಡ್ಲಿಯ ಯುವರಾಜ (28), ಭದ್ರಾವತಿ ತಾಲೂಕಿನ ದೇವರ ನರಸೀಪುರದ ಶ್ರೀನಿಧಿ (20) ಬಂಧಿತರು.

ಗಾಡಿಕೊಪ್ಪದಲ್ಲಿರುವ ಕಾರ್ತಿಕೇಯನ್ ಅವರ ಗೋಡೌನ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದು ತುಂಗಾನಗರ ಠಾಣೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 338 ಚೀಲಗಳಲ್ಲಿದ್ದ ಅಕ್ಕಿ, ಎರಡು ಕ್ಯಾಂಟರ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಒಂದು ಚೀಲಗಳನ್ನು ಹೊಲಿಗೆ ಯಂತ್ರ ಜಪ್ತಿ ಮಾಡಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.