ಜಿಲ್ಲೆ

ನಮ್ಮತನಕ್ಕೆ ಆತಂಕ ಎದುರಾದಾಗ ಒಗ್ಗಟ್ಟು ಪ್ರದರ್ಶಿಸಬೇಕು

ಸುನಿಲ್ ಪೊನ್ನೇಟಿ

ಕುಶಾಲನಗರ

ನಾವು ಯಾರನ್ನೂ ದ್ವೇಷಿಸದೆ ನಮ್ಮತನಕ್ಕೆ ಆತಂಕ ಎದುರಾದಾಗ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಇದೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಇದರ ಅಂಗ ಸಂಸ್ಥೆಗಳು, ಆಲೂರು ಸಿದ್ದಾಪುರ, ಸುಂಟಿಕೊಪ್ಪ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಚೆಟ್ಟಳ್ಳಿ ಹಾಗೂ ಪಿರಿಯಾಪಟ್ಟಣ ಗೌಡ ಸಮಾಜದ ಸಹಯೋಗದಲ್ಲಿ ಭಾನುವಾರ ಕುಶಾಲನಗರದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ -2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಸಂಸ್ಕೃತಿ ಉಳಿಸುವ ಜವಾಬ್ದಾರಿ ಅಕಾಡೆಮಿ ಮೇಲಿದೆ. ಹಿರಿಯರು ಮಕ್ಕಳಿಗೆ ತಮ್ಮ ಭಾಷೆ, ಸಂಸ್ಕೃತಿಯ ಅರಿವು ಮೂಡಿಸಬೇಕು. ಜನಾಂಗದೊಳಗೆ ಪಕ್ಷಾತೀತವಾಗಿ ಕಾರ್ಯಕ್ರಮಗಳು ನಡೆದರೆ ಅಂಥ ಸಮುದಾಯ ಬಲಿಷ್ಠ ಆಗುತ್ತದೆ ಎಂದು ಹೇಳಿದರು.

ಪಿರಿಯಾಪಟ್ಟಣ ಗೌಡ ಸಮಾಜದ ನಿರ್ದೇಶಕ ಕುಯ್ಯಮುಡಿ ಅಶ್ವಿನಿ ಕುಮಾರ್ ಮಾತನಾಡಿ

ಭಾಷೆಯ ಬಗೆಗಿನ ಕೀಳರಿಮೆಯಿಂದ ಅರೆಭಾಷೆ ಬಳಕೆ ಕಡಿಮೆ ಆಗುತ್ತಿದೆ. ಭಾಷೆ ಬಳಕೆ ಕಡಿಮೆ ಆದರೆ ಆ ಭಾಷೆ ನಶಿಸಿ ಹೋಗುವ ಆತಂಕ ಇದೆ. ಭಾಷೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವೈವಿಧ್ಯತೆ ಇದೆ. ಇಂಥ ಶಬ್ದಗಳನ್ನು ಸಂಗ್ರಹಿಸಿ ಪದಕೋಶ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಮುಂದಡಿ ಇಡಬೇಕು ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಮಂಗಳೂರು ವಿವಿ ಅರೆಭಾಷೆ ಅಧ್ಯಯನ ಪೀಠದಲ್ಲಿ 2 ಕೋಟಿ ರೂ. ಮೂಲಧನ ಇದೆ. ಅದರ ಬಡ್ಡಿಯಲ್ಲಿ ಪೀಠ ಕಾರ್ಯನಿರ್ವಹಣೆ ಮಾಡುತ್ತಿದೆ. ಪೀಠದ ಮೂಲಕ ಅರೆಭಾಷಿಕ ಜನರ ಜನಗಣತಿ ಬೇಡಿಕೆ ಇಡಲಾಗಿದೆ. ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಎನ್‌ಎಸ್‌ಎಸ್ ಮಕ್ಕಳಿಗೆ ಸ್ಥಳನಾಮದ ವಿವರಗಳ ಸಂಗ್ರಹಕ್ಕೆ ಜವಾಬ್ದಾರಿ ಕೊಡಲಾಗುತ್ತಿದೆ ಎಂದರು.

ಸಣ್ಣ ಭಾಷೆಗಳು ಇಂದು ಒಂದೊAದಾಗಿ ಸಾಯುತ್ತಿದ್ದು, ನಾವೆಲ್ಲರೂ ಅದಕ್ಕೆ ಸಾಕ್ಷಿಗಳಾಗುತ್ತಿದ್ದರೂ ಈ ಬಗ್ಗೆ ಪ್ರತಿಕ್ರಿಯಿಸದೇ ಇರುವುದು ಒಂದು ಜನಾಂಗದ ಹತ್ಯೆಗೆ ಸಮ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅರೆಭಾಷೆ ಗಡಿನಾಡ ಉತ್ಸವದಲ್ಲಿ ಮಾತನಾಡಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ, ಕಾರ್ಯಕ್ರಮ ಸಂಚಾಲಕ ಪೊನ್ನಚ್ಚನ ಮೋಹನ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಅಂಬೆಕಲ್, ವಿವಿಧ ಗೌಡ ಸಮಾಜಗಳ ಅಧ್ಯಕ್ಷರಾದ ದೇವಾಯೀರ ಗಿರೀಶ್, ಕುಂಜಿಲನ ಮಂಜುನಾಥ, ಗುಡ್ಡೆಮನೆ ವಿಶುಕುಮಾರ್,

ಕೆಮ್ಮಾರನ ಉತ್ತಯ್ಯ, ಐಯ್ಯಂಡ್ರ ರಾಘವಯ್ಯ, ಪೊಕ್ಕುಳಂಡ್ರ ವಸಂತಕುಮಾರ್, ಚೆರಿಯಮನೆ ಮಾದಪ್ಪ ಇದ್ದರು.