ಮಡಿಕೇರಿ:
ಕೊಡಗಿನಲ್ಲಿ ಹಾಲೇರಿ ಅರಸರ ಆಳ್ವಿಕೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ರಾಜರ ಗದ್ದುಗೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿರುವ ಈ ಪ್ರದೇಶದಲ್ಲಿ ಒತ್ತುವರಿ ಆಗಿರುವ ಜಾಗ ತೆರವು ಮಾಡಲು ಸರ್ಕಾರ ಆದೇಶ ಮಾಡಿದೆ. ಈ ಸಂಬAಧ ಈ ಹಿಂದೆ ನ್ಯಾಯಾಲಯದಿಂದಲೂ ಆದೇಶ ಜಾರಿಯಾಗಿತ್ತು. ಪರ-ವಿರೋಧ ಹೋರಾಟಗಳೂ ನಡೆದಿದ್ದವು.
ಜಿಲ್ಲಾ ಕೇಂದ್ರ ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದಲ್ಲಿ ಕುಳ ನಂ. ೧೦೮, ಸ.ನಂ. ೩೦:೧ರಲ್ಲಿ ವೀರರಾಜೇಂದ್ರ, ಲಿಂಗರಾಜ ಹಾಗೂ ರಾಜಗುರು ರುದ್ರಮುನಿ ಅವರಿಗೆ ಸಂಬAಧಿಸಿದ ಗದ್ದುಗೆಗಳು (ಸಮಾಧಿ) ಇದೆ. ಇವುಗಳನ್ನು ಸಂರಕ್ಷಿತ ಸ್ಮಾರಕಗಳೆಂದು ೧೯೮೧ ಸೆ.೨೫ರಂದು ಸರ್ಕಾರ ಘೋಷಿಸಿದ್ದು, ಈ ಸಂರಕ್ಷಿತ ಸ್ಮಾರಕಗಳಿಗೆ ಸಂಬAಧಿಸಿದAತೆ ೧೯.೮೬ ಎಕರೆ ಜಾಗ ಇರುವುದನ್ನು ಅಂದಿನ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಈಗಿನ ಮಾಹಿತಿ ಪ್ರಕಾರ ೧.೧೮ ಎಕರೆ ಜಾಗ ಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಬಹಳ ಹಿಂದಿನಿAದಲೂ ಹೋರಾಟಗಳು ನಡೆಯುತ್ತಾ ಬಂದಿದ್ದು, ನ್ಯಾಯಾಲಯದ ಮೂಲಕವೂ ಆದೇಶ ಜಾರಿ ಆಗಿತ್ತು.
೧೯.೮೬ ಎಕರೆ ಜಾಗದ ಪೈಕಿ ೦.೦೬ ಎಕರೆ ಜಾಗ ೧೯೮೧ಕ್ಕೂ ಮೊದಲು ಇತರರಿಗೆ ಮಂಜೂರಾಗಿದೆ. ೧.೨೫ ಎಕರೆ ಜಾಗವನ್ನು ಕರ್ನಾಟಕ ಕೋ ಆಪರೇಟಿವ್ ಯೂನಿಯನ್‌ಗೆ ೧೯೮೨ರ ಮಾ. ೧೯ರ ತೀರ್ಮಾನದಂತೆ ಮಾರಾಟವಾಗಿದ್ದು, ೧೯೯೪ರ ಏ.೮ಕ್ಕೆ ಖಾತೆ ಅಂಗೀಕಾರವಾಗಿದೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ವರದಿಯನ್ನು ಈ ಹಿಂದೆಯೇ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆ ಆಗಿತ್ತು. ಆದರೆ ಇದೀಗ ಒತ್ತುವರಿ ಆಗಿರುವ ೧.೧೮ ಎಕರೆ ಜಾಗವನ್ನು ತೆರವು ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ನ.೪ರಂದು ಆದೇಶ ಮಾಡಿದ್ದಾರೆ.
ಒತ್ತುವರಿ ಆಗಿರುವ ೧.೧೮ ಎಕರೆ ಜಾಗದಲ್ಲಿ ವಾಸದ ಮನೆ, ಶಾಲೆ, ತೋಟಗಾರಿಕೆ ಇಲಾಖೆ ವತಿಯ ಹೊಟೇಲ್, ಐಟಿಡಿಪಿ ಇಲಾಖೆ (ಬಿಸಿಎಂ) ಮೆಟ್ರಿಕ್‌ನ ನಂತರದ ಬಾಲಕರ ವಸತಿ ನಿಲಯ ಕಟ್ಟಡಗಳು ಸೇರಿದಂತೆ ಒತ್ತುವರಿಯ ೨೮ ಪ್ರಕರಣಗಳಿವೆ. ಇವರೆಲ್ಲಾ ಒತ್ತುವರಿ ತೆರವು ಆದೇಶ ಸ್ವೀಕರಿಸಿದ ೧೫ ದಿನಗಳ ಒಳಗೆ ತೆರವು ಮಾಡುವುಂತೆ ಆದೇಶದಲ್ಲಿ ತಿಳಿಸಲಾಗಿದೆ. ಒಂದು ವೇಳೆ ನಿಗದಿತ ಗಡುವಿನಲ್ಲಿ ಒತ್ತುವರಿದಾರರು ತೆರವು ಮಾಡದಿದ್ದಲ್ಲಿ ತೆರವುಗೊಳಿಸಲು ಕೊಡಗು ಜಿಲ್ಲಾಧಿಕಾರಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಸರ್ಕಾರದ ಆದೇಶವನ್ನು ಜಿಲ್ಲಾಡಳಿತ ಕೂಡಲೇ ಜಾರಿಗೆ ತರಬೇಕು. ಗದ್ದುಗೆಗೆ ಸೇರಿದ ಅತಿಕ್ರಮಿತ ಪ್ರದೇಶವನ್ನು ತೆರವು ಮಾಡಲೇಬೇಕು. ಇದೀಗ ಉಳಿದಿಕೊಂಡಿರುವ ೧೭ ಎಕರೆಯನ್ನಾದರೂ ಸಂರಕ್ಷಿಸುವ ಕೆಲಸ ಆಗಬೇಕು. ಗದ್ದುಗೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿತಾಣವನ್ನಾಗಿ ರೂಪಿಸಬೇಕು. ಈ ಮೂಲಕ ಕೊಡಗಿನ ರಾಜಪರಂಪರೆ ಜನಸಾಮಾನ್ಯರಿಗೂ ತಿಳಿಯುವಂತೆ ಆಗಬೇಕು.
ಹೆಚ್.ವಿ. ಶಿವಪ್ಪ, ಅಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕೊಡಗು ಜಿಲ್ಲಾ ಘಟಕ
ಕೇವಲ ೧.೧೮ ಎಕರೆ ಮಾತ್ರ ಅಲ್ಲ, ರಾಜರ ಗದ್ದುಗೆಗೆ ಸೇರಿದ ಇನ್ನೂ ಹೆಚ್ಚಿನ ಜಾಗ ಅತಿಕ್ರಮಣ ಆಗಿದೆ. ಎಲ್ಲಾ ಅತಿಕ್ರಮಣಗಳನ್ನು ತೆರವು ಮಾಡಿ ಸ್ಮಾರಕದ ಸಂರಕ್ಷಣೆ ಕೆಲಸ ಆಗಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಅತಿಕ್ರಮಣ ತೆರವು ಆಗದಿದ್ದರೆ ನಮ್ಮ ಸಂಘಟನೆಯಿAದ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಪ್ರಕಟಿಸಲಾಗುತ್ತದೆ.
ಶಾಂಭಶಿವಯ್ಯ ಟಿ.ಎಸ್., ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕೊಡಗು ಜಿಲ್ಲಾ ಘಟಕ