ಜಿಲ್ಲೆ

ಸಮಾಜದ ಉನ್ನತಿಗೆ ಗದ್ದೆಮನೆ ವಿಶ್ವನಾಥ್ ಟ್ರಸ್ಟ್ ಶ್ರಮ

ಶೃಂಗೇರಿ: ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಉದ್ಯಮಿ ಗದ್ದೆಮನೆ ವಿಶ್ವನಾಥ್ ನೀಡುತ್ತಿರುವ ಕೊಡುಗೆ ದೊಡ್ಡದು ಎಂದು ಗದ್ದೆಮನೆ ವಿಶ್ವನಾಥ್ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿ ನಾಗೇಶ್‌ಗೌಡ ತಿಳಿಸಿದರು.

ಸರ್ಕಾರಿ ಅಸ್ಪತ್ರೆಗೆ ಸೋಮವಾರ ಗದ್ದೆಮನೆ ವಿಶ್ವನಾಥ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ತುರ್ತು ಚಿಕಿತ್ಸಾ ಕಿಟ್‌ಗಳನ್ನು ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ಗೆ ಹಸ್ತಾಂತರಿಸಿ ಮಾತನಾಡಿ, ಜಾತಿ, ಮತ, ಪಂಥಗಳ ಬೇಧವಿಲ್ಲದೇ ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಶೈಕ್ಷಣಿಕ ಸೌಲಭ್ಯವನ್ನು ನೀಡುತ್ತಾ ಸಮಾಜದ ಉನ್ನತೀಕರಣದ ಕಾಳಜಿಯೊಂದಿಗೆ ಗದ್ದೆಮನೆ ವಿಶ್ವನಾಥ್ ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಸ್ತುತ ಶೃಂಗೇರಿ ಕ್ಷೇತ್ರದ ಎಲ್ಲಾ ಸರ್ಕಾರಿ ಅಸ್ಪತ್ರೆಗಳಿಗೆ ಕಿಟ್ ವಿತರಿಸಲಾಗಿದೆ. ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲು ನೀಟ್ ಹಾಗೂ ಸಿಇಟಿ ಪುಸ್ತಕಗಳನ್ನು ನೀಡಲಾಗಿದೆ. ಶೃಂಗೇರಿ ಕ್ಷೇತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಕ್ಕೆ ಸುಮಾರು 900 ಪುಸ್ತಕಗಳನ್ನು ವಿತರಿಸಲಾಗಿದೆ. ಕ್ಷೇತ್ರದಲ್ಲಿ ಆನೆ ದಾಳಿಯಿಂದ ಮೃತಗೊಂಡ ವ್ಯಕ್ತಿಗಳ ಕುಟುಂಬಕ್ಕೆ ತಲಾ ಒಂದು ಲಕ್ಷ, ಶೃಂಗೇರಿ ಗಾಂಧಿ ಮೈದಾನದ ಬ ವ್ಯಾಪಾರಸ್ಥರಿಗೆ ತಲಾ 25,000 ರೂ, 8,500 ಸಾವಿರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ,ಆಶಾಕಾರ್ಯಕರ್ತೆರಿಗೆ ಸಹಕಾರ ನೀಡಲಾಗಿದೆ ಎಂದು ತಿಳಿಸಿದರು.

ಟ್ರಸ್ಟ್ ಪದಾಧಿಕಾರಿಗಳಾದ ನಿಶಾಂತ್, ಆಶೋಕ್ ನಿಲುವಾನಿ, ಸುಹಾಸ್ ಗದ್ದೆಮನೆ, ವಿಕಾಸ್ ಮಾವಿನಮನೆ, ಸಚಿನ್ ಉಪಸ್ಥಿತರಿದ್ದರು.