ಸೂಡಿಯ ಐತಿಹಾಸಿಕ ಪ್ರಸಿದ್ದ ಜೋಡುಕಳಸದ ದೇವಸ್ಥಾನ. 
ಗದಗ

ನಿರ್ಲಕ್ಷಕ್ಕೆ ನಲುಗುತ್ತಿರುವ ಐತಿಹಾಸಿಕ ತಾಣಗಳು

ಸೂಡಿ ಗ್ರಾಮದ ಪ್ರಸಿದ್ಧ ದೇವಾಲಯಗಳು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಜೋಡು ಕಳಸದ ದೇವಸ್ಥಾನ ರಾಜ್ಯ ಪುರಾತತ್ವ ಇಲಾಖೆಗೆ ಸಂಬಂಧಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತದೆ. ಅರ್ಪೂಣಗೊಂಡಿರುವ ಶೌಚಗೃಹ ಕಾಮಗಾರಿಯನ್ನು 15 ದಿನಗಳಲ್ಲಿ ರ್ಪೂಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ. ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಸ್ಥಳಿಯ ಗ್ರಾಪಂಗೆ ತಿಳಿಸಲಾಗುವುದು.
ಕೊಟ್ರೇಶ ವಿಭೂತಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ
ದೇವಸ್ಥಾನಗಳ ಸ್ವಚ್ಛತೆ ಹಾಗೂ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಅರ್ಪೂಣಗೊಂಡ ಕಾಮಗಾರಿಗಳನ್ನು ಶ್ರೀ ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯವಾಗಲಿ.
ವೀರಣ್ಣ ಶೆಟ್ಟರ್​, ರೋಣ ಬ್ಲಾಕ್​ ಕಾಂಗ್ರೆಸ್​ ಅದ್ಯಕ್ಷ

ಮಂಜುನಾಥ ಕುದರಿಕೋಟಿ ಗಜೇಂದ್ರಗಡ

ಸೂಕ್ತ ನಿರ್ವಹಣೆ, ಮೂಲಸೌಕರ್ಯ ಹಾಗೂ ಭದ್ರತೆಯ ಕೊರತೆಯಿಂದ ಪ್ರವಾಸಿಗರನ್ನು ಸೆಳೆಯಬೇಕಾದ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಕಲ್ಯಾಣಿ ಚಾಲುಕ್ಯರ ಕಾಲದ ಪ್ರಸಿದ್ಧ ದೇವಾಲಯಗಳು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದ್ದು, ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸೂಡಿಯ ಜೋಡು ಕಳಸದ ದೇವಸ್ಥಾನ, ನಾಗಕುಂಡ, ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳನ್ನು ವೀಸಲು ನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ಬೆಳಕು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಪ್ರವಾಸಿಗರು ದೇವಾಲಯದೊಳಗೆ ತೆರಳಿ ಇತಿಹಾಸವನ್ನು ಕಣ್ತುಂಬಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಮದ್ಯ, ಸಿಗರೇಟ್​, ಗುಖ್ಕಾಕ್ಕೆ ಅಡ್ಡೆ: ಜೋಡು ಕಳಸದ ದೇವಸ್ಥಾನ ಆವರಣದಲ್ಲಿ ಕೆಲವರು ನಿತ್ಯ ಮದ್ಯ ಸೇವನೆ, ಸಿಗರೇಟ್​ ಹಾಗೂ ಗುಖ್ಕಾ ಸೇವನೆಯಂತಹ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವರು ಹಗಲು&ರಾತ್ರಿ ಆವರಣದಲ್ಲಿಯೇ ಮಲಗುತ್ತಿರುವುದರಿಂದ ಐತಿಹಾಸಿಕ ಸ್ಮಾರಕದ ಪಾವಿತ್ರ$್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳಿಯರು ದೂರಿದ್ದಾರೆ.

ಕಸವಾದ 15 ಲಕ್ಷ ರೂ.: 2023&24ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ 15 ಲಕ್ಷ ರೂ. ಅನುದಾನದಲ್ಲಿ ಜೋಡು ಕಳಸದ ದೇವಸ್ಥಾನದ ಸುತ್ತ ಗಿಡಗಳನ್ನು ನೆಟ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸೂಕ್ತ ನೀರಿನ ವ್ಯವಸ್ಥೆ ಹಾಗೂ ನಿರಂತರ ನಿರ್ವಹಣೆ ಇಲ್ಲದೆ ಗಿಡಗಳು ಒಣಗಿ, ಆವರಣ ಕಳೆ&ಕಸದಿಂದ ಅಸ್ತವ್ಯಸ್ತಗೊಂಡಿದೆ.

ಪ್ರತಿ ವರ್ಷ ದೇವಸ್ಥಾನಗಳ ಅಭಿವೃದ್ಧಿಗಾಗಿ ಕ್ರಿಯಾಯೋಜನೆಯಲ್ಲಿ ಅನುದಾನ ಮೀಸಲಿಡಲಾಗುತ್ತಿದ್ದರೂ ಅದರ ಸಮರ್ಪಕ ಬಳಕೆ ಹಾಗೂ ಕಾಮಗಾರಿಗಳ ನಿರಂತರ ನಿರ್ವಹಣೆ ಆಗುತ್ತಿಲ್ಲ. ಅನುದಾನ ಮೀಸಲಿಡುವುದಷ್ಟೇ ಅಲ್ಲ, ಕೈಗೊಂಡ ಕಾಮಗಾರಿಗಳು ವರ್ಷಗಳ ಕಾಲ ಉಳಿಯುವಂತೆ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ದೇವಾಲಯಗಳ ಆವರಣದಲ್ಲಿ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸುವ ಜತೆಗೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ರ್ಪೂಣಗೊಳಿಸಿ, ಈಗಾಗಲೇ ಖರ್ಚು ಮಾಡಿರುವ ಅನುದಾನದಲ್ಲಿ ನಿಮಿರ್ಸಿರುವ ಸೌಲಭ್ಯಗಳ ನಿರಂತರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳಿಯರು ಹಾಗೂ ಪ್ರವಾಸಿಗರ ಒತ್ತಾಯವಾಗಿದೆ.

ಶೌಚಗೃಹ ಕಾಮಗಾರಿಗೆ ಗ್ರಹಣ

ಪ್ರವಾಸಿಗರ ಅನುಕೂಲಕ್ಕಾಗಿ ನಿಮಿರ್ಸಲಾಗುತ್ತಿರುವ ಸಾರ್ವಜನಿಕ ಶೌಚಗೃಹ ಕಾಮಗಾರಿ ಐದು ವರ್ಷ ಕಳೆದರೂ ರ್ಪೂಣಗೊಂಡಿಲ್ಲ. ಜೋಡು ಕಳಸದ ದೇವಸ್ಥಾನದ ಸಮೀಪ ಪ್ರವಾಸೋದ್ಯಮ ಇಲಾಖೆಯ 20 ಲಕ್ಷ ರೂ.ಅನುದಾನದಡಿ ಲ್ಯಾಂಡ್​ ಆಮಿರ್ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿರುವ ಕಟ್ಟಡಕ್ಕೆ ಇನ್ನೂ ವಿದ್ಯುತ್​, ನೀರು ಹಾಗೂ ಬಾಗಿಲುಗಳಂತಹ ಮೂಲಸೌಲಭ್ಯಗಳೇ ಇಲ್ಲ. ಕಟ್ಟಡದ ಸುತ್ತ ಹೂಳು, ಹುಲ್ಲು ಹಾಗೂ ಮುಳ್ಳುಕಂಟಿಗಳು ಬೆಳೆದಿದ್ದು, ಶೌಚಗೃಹ ಕಟ್ಟಡ ಪಾಳುಬಿದ್ದಂತಾಗಿದೆ.

3 ಕೋಟಿ ರೂ. ರ್ಖಚಾದರೂ ಸಿಗದ ಸ್ಪಂದನೆ

ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ನಾಗಕುಂಡ ಪುಷ್ಕರಣಿಗೆ ಹೊಸ ರೂಪ ನೀಡುವ ಉದ್ದೇಶದಿಂದ ದತ್ತು ಸ್ಮಾರಕ ಯೋಜನೆಯಡಿ ಕಳೆದ ವರ್ಷ 3 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನ ಕಾಮಗಾರಿ ಕೈಗೊಳ್ಳಲಾಗಿದೆ. ಡೆಕ್ಕನ್​ ಹೆರಿಟೇಜ್​ ಫೌಂಡೇಶನ್​ ಹಾಗೂ ಜಲ ಸಾಕ್ಷರತಾ ಪ್ರತಿಷ್ಠಾನದಿಂದ ಕೈಗೊಂಡ ಕಾಮಗಾರಿಗೆ ಅಂದಿನ ಪ್ರವಾಸೋದ್ಯಮ ಸಚಿವ ಎಚ್​.ಕೆ. ಪಾಟೀಲ ಹಾಗೂ ರೋಣ ೇತ್ರದ ಶಾಸಕ ಜಿ.ಎಸ್​. ಪಾಟೀಲ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ರ್ಪೂಣಗೊಂಡ ಬಳಿಕ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ, ನಿರ್ವಹಣೆ ಹಾಗೂ ಪ್ರವಾಸೋದ್ಯಮ ಪ್ರಚಾರಕ್ಕೆ ಬೇಕಾದ ಕ್ರಮಗಳು ಸಮರ್ಪಕವಾಗಿ ನಡೆಯದ ಕಾರಣ ನಾಗಕುಂಡ ಪುಷ್ಕರಣಿ ನಿರೀತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.