ಗಜೇಂದ್ರಗಡ ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಆಯೋಜಿಸಿದ್ದ ಲಿಂಗಧಾರಣೆ (linga)ಕಾರ್ಯಕ್ರಮವನ್ನು ಶ್ರೀ ಮಜ್ಜಗದ್ಗುರು ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
ಗದಗ

linga ಮನಸಿನ ಏಕಾಗ್ರತೆಗೆ ಲಿಂಗ ಧರಿಸಲಿ

ಗಜೇಂದ್ರಗಡ: ಇಷ್ಟಲಿಂಗ linga ಧರಿಸುವ ಮೂಲಕ ಭಕ್ತಿಯಿಂದ ಜ್ಞಾನ ಮಾರ್ಗದ ಮೂಲಕ ಬದುಕನ್ನು ಹಸನುಗೊಳಿಸಿ. ಲಿಂಗದೀಕ್ಷೆಯು ಮನಸನ್ನು ಏಕಾಗ್ರತೆ ಕಡೆ ತೆಗೆದುಕೊಂಡು ಹೋಗುತ್ತದೆ ಎಂದು ಗದಗಿನ ಶ್ರೀ ಮಜ್ಜಗದ್ಗುರು ನಾಲ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಕುರುಹಿನಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಿಂಗಧಾರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಕಲಿಸುವ ಮೂಲಕ ಅವರನ್ನು ಜ್ಞಾನವಂತರನ್ನಾಗಿಸಬೇಕು ಎಂದರು.
ಸಮಸ್ತ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಎಸ್.ಎಸ್. ಡೊಳ್ಳಿನ ಮಾತನಾಡಿ, ಲಿಂಗಾಧಾರಣೆ ಮೂಲಕ ಗುರುಗಳು ದೀಕ್ಷೆ ನೀಡಿದ್ದಾರೆ. ಅದರ ಪೂಜಾ ವಿಧಿ ವಿಧಾನಗಳನ್ನು ತಂದೆ ತಾಯಂದಿರು ಮಕ್ಕಳಿಗೆ ಹೇಳಿಕೊಡಬೇಕು. ಆಗ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಕೇಂದ್ರ ಕುರುಹಿನಶೆಟ್ಟಿ ಸಮಾಜದ ಸದಸ್ಯ ಅಶೋಕ ವನ್ನಾಲ ಮಾತನಾಡಿ, ಸಮಾಜ ನಿಂತ ನೀರಾಗಬಾರದು. ಸಮಾಜ ಬೆಳವಣಿಗೆ ಹೊಂದಬೇಕಾದರೆ ಯುವಕರ ಪಾತ್ರ ಮಹತ್ವದ್ದಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರು ಮುನ್ನಡೆದಾಗ ಸಮಾಜ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಪಿ.ಎನ್. ಡೊಳ್ಳಿನ, ನಿಂಗಪ್ಪ ಸಮಗಂಡಿ, ಅಂಬರೀಶ ಸಂಕನೂರ ಮಾತನಾಡಿದರು. ರತ್ನಾಕರ ಸ್ವಾಮೀಜಿ ನೀಲಕಂಠಮಠ, ದೇವಣ್ಣ ಬನಿಕಲ್, ಚನ್ನು ಸಮಗಂಡಿ, ಮಂಜುನಾಥ ಸಂಕನೂರ, ಗಿರೀಶ ಸಂಕನೂರ, ಅನಿಲ ಡೊಳ್ಳಿನ, ನಾಗರಾಜ ಸಂಕನೂರ, ರಾಚಪ್ಪ ಡೊಳ್ಳಿನ, ಬಸವರಾಜ ಹಗರಟಗಿ, ವಿರೂಪಾಕ್ಷ ಅಳವಂಡಿ, ಶರಣಪ್ಪ ಸಂಕನೂರ, ವಿಶ್ವನಾಥ ಗೌಡರ, ಕಳಕೇಶ ಅಳವಂಡಿ, ಇತರರು ಇದ್ದರು.