ಮುಂಡರಗಿ ಪಟ್ಟಣದ ಕೋಟೆ ಭಾಗದ ಶ್ರೀಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಮಹಾಭಾರತದ ವಿರಾಟ್ ಪರ್ವ ಕಥಾ ಪ್ರಸಂಗಗಳನ್ನು ಹೇಳಿಸಲಾಯಿತು. 
ಗದಗ

rain: ಮಳೆಗಾಗಿ ಪ್ರಾರ್ಥಿಸಿ ‘ವಿರಾಟ್ ಪರ್ವ ಕಥಾ ಪ್ರಸಂಗ’ ಶ್ರವಣ

ಮುಂಡರಗಿ: ಉತ್ತಮ ((rain) ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಕೋಟೆ ಭಾಗದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಸಮಿತಿ ವತಿಯಿಂದ ಶನಿವಾರ ದೇವಸ್ಥಾನ ಆವರಣದಲ್ಲಿ ಮಹಾಭಾರತದ ವಿರಾಟ್ ಪರ್ವ ಕಥಾ ಪ್ರಸಂಗಗಳನ್ನು ಹೇಳಿಸಲಾಯಿತು.
ತಾಲೂಕು ಸತತ ಬರಗಾಲಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಹಾಗೂ ಬಿತ್ತನೆಗೆ ಸಜ್ಜಾಗಿರುವ ರೈತರು ಚಿಂತಾಕ್ರಾಂತವಾಗಿದಾರೆ. ಹೀಗಾಗಿ ವಿರಾಟ್ ಪರ್ವ ಕಥನ ಪ್ರಸಂಗಗಳನ್ನು ಹೇಳಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮದ ಜನಪದ ಭೈರಿ ಜೊಗಪ್ಪ ಕಲಾವಿದರಾದ ಸೋಮಣ್ಣ, ಬಸವರಾಜಪ್ಪ ಮತ್ತು ಹನುಮಂತಪ್ಪ ಅವರಿಂದ ವಿರಾಟ್ ಪರ್ವ ಕಥೆ ಹೇಳಿಸಲಾಯಿತು.
ಮಳೆಗಾಗಿ ಪ್ರಾರ್ಥಿಸಿ ಈಗಾಗಲೇ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಗುರ್ಜಿಪೂಜೆ ಸೇರಿದಂತೆ ಹಲವು ಸಾಂಪ್ರದಾಯಿಕ ಪದ್ಧತಿಗಳನ್ನು ಆಚರಿಸಲಾಗಿದೆ. ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ದಾಸೋಹ ಸೇವೆಯೂ ಮಾಡಲಾಗಿದೆ. ಈಗ ವಿರಾಟ ಪರ್ವ ಕಥೆ ಶ್ರವಣ ಕಾರ್ಯಕ್ರಮ ನಡೆಸಲಾಗಿದ್ದು ವರುಣದೇವ ಕೃಪೆ ತೋರಲಿದ್ದಾನೆ ಎನ್ನುವ ನಂಬಿಕೆ ಜನರಲ್ಲಿದೆ.
ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಯಂಕಪ್ಪ ಮಲ್ಲಾರ್ಜಿ, ಶೇಖಪ್ಪ ಬಳ್ಳಾರಿ, ಷಡಕ್ಷರಿಸ್ವಾಮಿ ಅಳವಂಡಿಮಠ, ಈಶಪ್ಪ ಉಳ್ಳಾಗಡ್ಡಿ, ಅಂದಪ್ಪ ಹಂದ್ರಾಳ, ಈರಪ್ಪ ಬಳ್ಳಾರಿ, ಅರುಣ ಬಾರಕೇರ, ಶಿವಾನಂದ ದಂಡಿನ, ಶೇಖಪ್ಪ ಹಂದ್ರಾಳ, ವಾಸಪ್ಪ ದಂಡಿನ, ರಾಘು ಕುರಿ, ಉಮೇಶ ಬಳ್ಳಾರಿ, ಬಂಡೆಪ್ಪ ಜೋಳದ, ಮುದಿಯಪ್ಪ ಕುರಿ ಇದ್ದರು.