ಗದಗ: ನಗರದ ಆರ್ ಟಿ ಓ ಕಚೇರಿ ಮುಂಭಾಗದ ಗೃಹ ಮಂಡಳಿ ಬಡಾವಣೆಗೆ ಕಳೆದ 20 ವರ್ಷಗಳಿಂದ ಶಾಶ್ವತ ಕುಡಿಯುವ ನೀರು ಕಲ್ಪಿಸದ ಕುರಿತು ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂತಿರ್ ಬಿ.ಎಸ್. ಪಾಟೀಲ ಆದೇಶದ ಮೇರೆಗೆ ಗದಗ ಲೋಕಾಯುಕ್ತ ಕಚೇರಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಗೃಹ ಮಂಡಳಿ ಬಡಾವಣೆ ನೀರಿನ ಸಮಸ್ಯೆ ಕುರಿತು ಚರ್ಚೆ ಜರುಗಿತು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಗಮನಿಸಿರುವುದಾಗಿ ಲೋಕಾ ನ್ಯಾಯಮೂತಿರ್ ಬಿ.ಎಸ್. ಪಾಟೀಲ ಹೇಳಿದರು ಮತ್ತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಹಾಗೂ ಅಧಿಕಾರಿಗಳಿಗೆ ಮತ್ತೊಮ್ಮೆ ಸ್ಥಳ ಸಮೀೆ ಮಾಡಲು ತಿಳಿಸಿದರು.
ಬಡಾವಣೆಯಲ್ಲಿ ಶಾಶ್ವತ ಕುಡಿಯುವ ನೀರು ಸಂಪರ್ಕ ಮಾಡಲು ಗೃಹ ಮಂಡಳಿ ಇಲಾಖೆಯಿಂದ ನಗರಸಭೆಗೆ 4.50 ಕೋಟಿ ಮೊತ್ತ ಪಾವತಿ ಆದ ಬಗ್ಗೆ ಹಾಗೂ ಹಣ ಪಾವತಿ ಆದರೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದ ಬಗ್ಗೆ ವಿಜಯವಾಣಿ ದಿನ ಪತ್ರಿಕೆ ಸರಣಿ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚೆ ಜರುಗಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.