ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ವೀರಭದ್ರೇಶ್ವರ ಚರಿತಾಮೃತ ಮತ್ತು ಸಿದ್ಧಾಂತ ಶಿಖಾಮಣಿ ಗ್ರಂಥ ಪ್ರವಚನದ 7ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಶಿಧರ ಸಂಕನಗೌಡ್ರ, ಉಮೇಶ ಸಂಗನಾಳಮಠ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಕಲ್ಮೇಶ ತೊಂಡಿಹಾಳ ಇದ್ದರು. 
ಗದಗ

ಸರ್ವಜಾತಿಗಳ ಆರಾಧಕ ಶ್ರೀ ವೀರಭದ್ರ ದೇವರು (VEERABHADRA)

ವಿರೂಪಾಕ್ಷಯ್ಯ ಗುದ್ನಯ್ಯನವರಮಠ
ನರೇಗಲ್ಲ: ದೇಶದ ವಿವಿಧೆಡೆ ಶ್ರೀ ವೀರಭದ್ರೇಶ್ವರ ದೇವರ (VEERABHADRA) ದೇವಸ್ಥಾನಗಳಿದ್ದು, ಶ್ರೀ ವೀರಭದ್ರ ದೇವರನ್ನು ಸರ್ವ ಜಾತಿ, ಜನಾಂದವರು ಆರಾಧಿಸುತ್ತಾರೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಶ್ರೀ ವೀರಭದ್ರೇಶ್ವರ ಚರಿತಾಮೃತ ಮತ್ತು ಸಿದ್ಧಾಂತ ಶಿಖಾಮಣಿ ಗ್ರಂಥ ಪ್ರವಚನದ 7ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಕರ್ನಾಟಕದಲ್ಲಿ ಎಲ್ಲರೂ ಆರಾಧಿಸುವ ಶ್ರೀ ವೀರಭದ್ರ ದೇವರಿಂದಲೇ ಕನ್ನಡಿಗ ಎಂಬ ನಾಮ ಬಂದಿದೆ. ಯಡೂರು, ಗೊಡಚಿ, ರಾಯಚೋಟಿ, ಕಾರಡಗಿ, ಸಿಂಗಟಾಲೂರು, ತಲಕಾಡು, ಹುಮನಾಬಾದ ವೀರಭದ್ರ ದೇವರ ಪ್ರಮುಖ ಕ್ಷೇತ್ರಗಳಾಗಿವೆ. ಅಲ್ಲಿಗೆ ಹೋಗಿ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. 
ರೋಣ ಮಂಡಳ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಜಕ್ಕಲಿ ಮಾತನಾಡಿ, ನರೇಗಲ್ಲ ಸೇರಿದಂತೆ ನಮ್ಮ ಸುತ್ತಮುತ್ತಲಿನ ಹಳ್ಳಿಗೆ ಹಿರೇಮಠದ ಪೂಜ್ಯರಂತ ಅತ್ಯುತ್ತಮ ಗುರುಗಳು ದೊರೆತಿರುವುದು ನಮ್ಮೆಲ್ಲರ ಪುಣ್ಯ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಜೀವನ ಸಗಿಸೋಣ ಎಂದರು. 
ಶಶಿಧರ ಸಂಕನಗೌಡ್ರ, ವಕೀಲ ಉಮೇಶ ಸಂಗನಾಳಮಠ ಮಾತನಾಡಿದರು. ಉದ್ಯಮಿ ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಕಲ್ಮೇಶ ತೊಂಡಿಹಾಳ, ಇತರರು ಉಪಸ್ಥಿತರಿದ್ದರು.
ರುದ್ರಯ್ಯ ಸೊಬರದಮಠ ನಿರೂಪಿಸಿದರು. ಹಿರೇಮಠ ಶಾಲೆಯ ವಿದ್ಯಾರ್ಥಿಗಳು ವೀರಭದ್ರೇಶ್ವರನ ವಡಪು ಹೇಳಿದರು. ಕೋಡಿಕೊಪ್ಪದ ಭಕ್ತರು ಗುರುಗಳನ್ನು ಸನ್ಮಾನಿಸಿದರು.