ನರೇಗಲ್ಲ ಸಮೀಪದ ಅಬ್ಬಿಗೇರಿಯ ಸರ್ಕಾರಿ ಗಂಡು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಕಾಂಪೌಂಡ್ ಸುತ್ತಲೂ ನಿರ್ಮಿಸಲಾಗಿದ್ದ ಅನಧಿಕೃತ ಅಂಗಡಿಗಳನ್ನು (shop clearance)ತೆರವುಗೊಳಿಸಲಾಯಿತು. 
ಗದಗ

shop clearance ಅನಧಿಕೃತ ಅಂಗಡಿ ತೆರವು

ಮಂಜುನಾಥ ಕೆಂಪಸಣ್ಣವರ
ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಪಾಳಾ-ಬದಾಮಿ ರೋಡ್, ನರೇಗಲ್ಲ ರಸ್ತೆಯಲ್ಲಿನ ಅನಧಿಕೃತ ಅಂಗಡಿಗಳನ್ನು shop clearance ತೆರವುಗೊಳಿಸಲಾಯಿತು.
ಅಬ್ಬಿಗೇರಿ ಗ್ರಾಮದ ಸರ್ಕಾರಿ ಗಂಡು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಕಾಂಪಾಂಡ್ ಸುತ್ತಲೂ ತಲೆಎತ್ತಿದ್ದ 30ಕ್ಕೂ ಅಧಿಕ ಅನಧಿಕೃತ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು, ಪಾಲಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ರೋಣ ತಾಪಂ ಇಒ ಅವರಿಗೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಕಂದಾಯ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡರು.
ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಅಬ್ಬಿಗೇರಿ ಗ್ರಾಮದ ಶಾಲೆಗಳ ಕಾಂಪೌಂಡ್ ಹತ್ತಿರ ಅನಧಿಕೃತ ಅಂಗಡಿಗಳನ್ನು ಸ್ಥಾಪಿಸಿ, ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅದರಂತೆ ಅನಧಿಕೃತ ಅಂಗಡಿಗಳ ಮಾಲೀಕರಿಗೆ ಕಳೆದೊಂದು ತಿಂಗಳಿನಿಂದ ಮೌಖಿಕವಾಗಿ ಹಾಗೂ ಲಿಖಿತವಾಗಿ ಅಂಗಡಿಗಳ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಅದಕ್ಕೆ ಸ್ಪಂದಿಸದ ಕಾರಣ ಅಂಗಡಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜತೆಗೆ ತೆರವು ಕಾರ್ಯಾಚರಣೆಗೆ ಅಂಗಡಿಯವರು ಸಹಕರಿಸಿದ್ದಾರೆ ಎಂದರು.
ರೋಣ ತಹಸೀಲ್ದಾರ್ ನಾಗರಾಜ ಕೆ., ಪಿಎಸ್‌ಐ ಪ್ರಕಾಶ ಬಣಕಾರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಜೆಇ ಸಂತೋಷ ನೀಲಣ್ಣವರ, ಸಂಗಯ್ಯ ಗದ್ದನಕೇರಿ, ಪಿಡಿಒ ಲೋಹಿತ್ ಎಂ., ಸಿಆರ್‌ಪಿ ಎಸ್.ಆರ್. ಮೂಲಿಮನಿ ಇದ್ದರು.