ಪಟ್ಟಣದ ಲೋಧಿಗಲ್ಲಿ ಬಡಾವಣೆಯ ರಿಯಾಜ್‌ಅಹ್ಮದ್ ಖಾದರಸಾಬ್ ಖಲೀಫ್ (45) ಎಂಬುವವರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನರಗುಂದ: ಪಟ್ಟಣದಲ್ಲಿ ಅಮಾವಾಸ್ಯೆ ದಿನದಂದು ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಲೋಧಿಗಲ್ಲಿ ಬಡಾವಣೆಯ ರಿಯಾಜ್‌ಅಹ್ಮದ್ ಖಾದರಸಾಬ್ ಖಲೀಫ್ (45) ಎಂಬುವವರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇವರು ನಗರದ ಬಸ್ ನಿಲ್ದಾಣ ಬಳಿಯಿರುವ ಇಂದಿರಾ ಕ್ಯಾಂಟೀನ್‌ಗೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಉಪಾಹಾರ ಸೇವಿಸಲು ರಸ್ತೆ ದಾಟುತ್ತಿದ್ದಾಗ ಕೇರಳದಿಂದ ನರಗುಂದ ಮಾರ್ಗವಾಗಿ ಬರೋಡಾಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪೊಲೀಸರು ಲಾರಿ ಹಾಗೂ ಲಾರಿ ಚಾಲಕ ಶರವಣ ಚಲ್ಲಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಮೃತನ ಪತ್ನಿ ಶಕೀಲಾ ಖಲೀಫ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಮದಗುಣಕಿ ಗ್ರಾಮದ ಬಳಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಭವಿಸಿದೆ. ತಾಲೂಕಿನ ಸುರಕೋಡ ಗ್ರಾಮದ ವೆಂಕಪ್ಪ ಹನುಮಪ್ಪ ಸುಗ್ಗಿ (70) ಮೃತ ಬೈಕ್ ಸವಾರ. ಹಿಂಬದಿ ಸವಾರ ಗದಿಗೆಪ್ಪ ತಳವಾರ ಹಾಗೂ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಸಂತೋಷ ಶರಣಪ್ಪ ಮಡಿವಾಳರ ಎಂಬುವವರ ತಲೆ, ಕೈ-ಕಾಲು ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಬ್ಬರಿಗೂ ನರಗುಂದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಆರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದದಿಂದ ತರಕಾರಿ ಸಂತೆ ಮಾಡಿಕೊಂಡು ಸುರಕೋಡ ಗ್ರಾಮಕ್ಕೆ ತೆರಳುತ್ತಿದ್ದ ವೆಂಕಪ್ಪ ಸುಗ್ಗಿ ಅವರ ದ್ವಿಚಕ್ರ ವಾಹನಕ್ಕೆ ಕೌಜಗೇರಿಯಿಂದ ನರಗುಂದಕ್ಕೆ ಆಗಮಿಸುತ್ತಿದ್ದ ಸಂತೋಷ ಮಡಿವಾಳರ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.