ಗಜೇಂದ್ರಗಡ ಪಟ್ಟಣದಲ್ಲಿ ಕಳ್ಳರಿಂದ ಚಿನ್ನಾಭರಣ ವಶಪಡಿಸಿಕೊಂಡಿರುವುದು. ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ ಇತರರಿದ್ದರು. 
ಗದಗ

ಕಳವು ಪ್ರಕರಣ-ಮೂವರ ಬಂಧನ

ವೀರೇಶ ಸೌದ್ರಿ
ಗಜೇಂದ್ರಗಡ: ಟಗರಿಗಲ್ಲಿಯ ಮನೆಯೊಂದರಲ್ಲಿ ವಾರದ ಹಿಂದೆ ನಡೆದಿದ್ದ ಕಳವು ಪ್ರಕರಣ ಭೇದಿಸುವಲ್ಲಿ ಪಟ್ಟಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ, 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ನಾಗರಾಜ ಮೂರ್ತಯ್ಯ ದೇವರಮನಿ, ಶಿವಮ್ಮ ದೇವರಮನಿ ಹಾಗೂ ಬಸಮ್ಮ ಇರಬಗೇರಿ ಬಂಧಿತರು. ಪ್ರಮುಖ ಆರೋಪಿ ನಾಗರಾಜ ಮೂರ್ತಯ್ಯ ದೇವರಮನಿ ವಿರುದ್ಧ ರಾಯಚೂರ ಜಿಲ್ಲೆಯ ನಾಲ್ಕು ಕಡೆ,  ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ವಿಜಯಪುರ, ಯಾದಗಿರಿ ಜೆಲ್ಲೆ ಸೇರಿದಂತೆ 9 ಕಡೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 ಫೆ. 17ರಂದು 78.730 ಗ್ರಾಂ. ಬಂಗಾರ ಹಾಗೂ 711.47 ಗ್ರಾಂ. ಬೆಳ್ಳಿ ಆಭರಣ ಕಳವಾಗಿತ್ತು. ಕಳ್ಳರ ಪತ್ತೆಗೆ ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜೆ.ಬಿ. ಪೂಜಾರ, ಎಂ.ಎಂ ಶೀಗಿಹಳ್ಳಿ, ಸದಾಶಿವ ಕದಂ, ಮಲ್ಲಿಕಾರ್ಜುನ ಮನೇನಕೊಪ್ಪ, ಎಸ್.ಎ. ಖಾಜಿ, ಆರ್.ಎಸ್. ಬನ್ನಿಗೋಳ, ಎಚ್.ವೈ. ಮ್ಯಾಗಳಮನಿ, ಮುತ್ತಪ್ಪ ಬಾವಿ ಇದ್ದರು. ತಂಡದ ಕಾರ್ಯವನ್ನು ಎಸ್.ಪಿ ರೋಹನ್ ಜಗದೀಶ ಶ್ಲಾಘಿಸಿದ್ದಾರೆ.