ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಉಚಿತ ಭದ್ರತಾ ಸೇವೆ ನೀಡಿದ ರೋಣ ತಾಲೂಕು ಮಾಜಿ ಸೈನಿಕರ ಸಂಘದ ಸದಸ್ಯರನ್ನು ತಾಲೂಕು ಶಿಕ್ಷಣ ಇಲಾಖೆಯ ವತಿಯಿಂದ ಹೊಳೆಆಲೂರ ಕಲ್ಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. 
ಗದಗ

Ex-Servicemen's ಮಾಜಿ ಸೈನಿಕರ ಸಂಘದ ಸದಸ್ಯರ ಕಾರ್ಯ ಶ್ಲಾಘನೀಯ

ಹೊಳೆಆಲೂರ: ರೋಣ ತಾಲೂಕಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುವ್ಯವಸ್ಥಿತವಾಗಿ ಜರುಗಲು ರೋಣ ತಾಲೂಕು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸದಸ್ಯರ ಶಿಸ್ತುಬದ್ಧ್ದ ಹಾಗೂ ಪ್ರಾಮಾಣಿಕ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಹೇಳಿದರು.
ಹೊಳೆಆಲೂರಿನ ಕಲ್ಮೇಶ್ವರ ಪ್ರೌಢಶಾಲೆ, ಯಚ್ಚರೇಶ್ವರ ಪ್ರೌಢಶಾಲೆ, ಬೆಳವಣಕಿಯ ವೀರಭದ್ರೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೆಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉಚಿತ ಭದ್ರತಾ (Ex-Servicemen's) ಸೇವೆ ನೀಡಿದ ನಿವೃತ್ತ ಸೈನಿಕರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ರಕ್ಷಣೆ, ಭದ್ರತೆ ಹಾಗೂ ಸಾರ್ವಭೌಮ ಕಾಪಾಡುವ ಶೌರ್ಯದ ಸಂಕೇತವಾಗಿರುವ ಯೋಧರ ಬಗ್ಗೆ ಹೆಮ್ಮೆ ಇದೆ. ಯುದ್ಧದಲ್ಲಿ ಮಾತ್ರವಲ್ಲ ಪ್ರಕೃತಿ ವಿಕೋಪದಂತಹ ಸಂಕಷ್ಟದ ಸಮಯದಲ್ಲಿ ಪ್ರಾಣದ ಹಂಗು ತೊರೆದು ಜನ, ಜಾನುವಾರು ರಕ್ಷಣೆಯಂತಹ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ. ನಾಲ್ಕು ವರ್ಷದ ಹಿಂದೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಹಿತಕರ ಘಟನೆ ವರದಿಯಾಗಿದ್ದವು.  ಈ ಬಾರಿ ಪರೀಕ್ಷೆ ಸುವ್ಯವಸ್ಥಿತವಾಗಿ ಜರುಗಲು ಮಾಜಿ ಸೈನಿಕರ ಸಂಘ ಸಹಕಾರ ನೀಡಿದೆ ಎಂದರು.
 ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ನೈಜ ಓದುಗನಿಗೆ ನ್ಯಾಯ ಸಿಕ್ಕರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.
 ನಿವೃತ್ತ ಸೈನಿಕರಾದ ಮಲ್ಲಿಕಾರ್ಜುನ ಅಂಗಡಕಿ, ಮುತ್ತಣ್ಣ ಗಡಾದ, ಚನ್ನಯ್ಯ ಮಠಪತಿ, ವೀರಣ್ಣ ಮಲ್ಲಕಾಜಪ್ಪನ್ನವರ, ಸುರೇಶ ಗಾಣಿಗೇರ, ಶರಣಪ್ಪ ಕವಾಸ್ತ, ಮುದಕಪ್ಪ ಸುಳ್ಳದ, ಯಚ್ಚರಪ್ಪ ಬಡಿಗೇರ, ಶಶಿಧರ ವಕ್ಕರ ಅವರನ್ನು ಸನ್ಮಾನಿಸಲಾಯಿತು.
 ಕಲ್ಮೇಶ್ವರ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂಎನ್. ತೇಜಿಗೌಡ್ರ, ಸೈನಿಕರ ಸಂಘದ ಗೌರವಾದ್ಯಕ್ಷ ರಂಗಪ್ಪ ತಳವಾರ, ಉಪಾಧ್ಯಕ್ಷ ಚನ್ನಬಸಪ್ಪ ನಲಗುಡ್ಡ, ಕಾರ್ಯದರ್ಶಿ ಚನ್ನಪ್ಪ ಬಾವಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಎಲ್. ನಾಯ್ಕರ, ಕೃಷಿ ಅಧಿಕಾರಿ ಎಸ್.ಎಫ್. ತಹಶೀಲ್ದಾರ, ಡಿ.ಬಿ. ಬಿರಾದಾರ, ವಿಶ್ವನಾಥ ಧನ್ನೂರ, ಅಮಿತಕುಮಾರ ಹಿರೇಮಠ, ಎ.ಎನ್. ನದಾಫ, ಬಿಆರ್‌ಪಿ ಈಶ್ವರ ಕುರಿ, ಎಂ.ಆರ್. ಗೌಡರ, ಬಸವರಾಜ ಖ್ಯಾಡದ, ವಿಶ್ವನಾಥ ಸುಳ್ಳದ ಇತರರಿದ್ದರು