POOR ಲಕ್ಷ್ಮೇಶ್ವರದಲ್ಲಿ ಪುರಸಭೆಯ ಮುಕ್ತಿ ವಾಹನದ ಶುಲ್ಕ ಕಡಿಮೆ ಮಾಡುವಂತೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಗೆ ಹೊಸದಾಗಿ ಖರೀದಿಸಲಾದ ಮುಕ್ತಿವಾಹಿನಿಗೆ (ಶವವಾಹನ) ವಿಧಿಸಲಾಗುತ್ತಿರುವ ಸೇವಾ ಶುಲ್ಕ 2000 ರೂ. ಬಡ ಜನರಿಗೆ ಭರಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನದ ಬಾಡಿಗೆ ಸೇವಾ ಶುಲ್ಕವನ್ನು ಕಡಿಮೆ ಮಾಡುವಂತೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಾಗರಾಜ ಚಿಂಚಲಿ ಮಾತನಾತನಾಡಿ, ಈ ಹಿಂದೆ ಇದ್ದ ಶವ ಸಾಗಿಸುವ ವಾಹನವು ಸಂಪೂರ್ಣ ಶಿಥಿಲಗೊಂಡು ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಪುರಸಭೆ ಹೊಸ ವಾಹನ ಖರೀದಿಸಿರುವುದು ಶ್ಲಾಘನೀಯ. ಆದರೆ ಏಕಾಎಕಿ ವಾಹನಕ್ಕೆ ವಿಧಿಸಲಾಗುವ ಶುಲ್ಕ ಹೆಚ್ಚಿಸಿರುವುದು ಬಡವರಿಗೆ ಹೊರೆಯಾಗಲಿದೆ. ಅದಕ್ಕಾಗಿ ಜನಸಾಮಾನ್ಯರಿಗೆ ಅನೂಕೂಲವಾಗುವಂತೆ ಬಾಡಿಗೆ ದರವನ್ನು 500 ರೂ. ನಿಗದಿಪಡಿಸುವಂತೆ ಮನವಿ ಮಾಡಿದರು. ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿ,ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಯಲ್ಲಪ್ಪ ಜಾಲಗಾರ, ಬಸವರಾಜ ದೊಡ್ಡಮನಿ, ಶಿವಣ್ಣ ಕಟಗಿ, ಸದಾನಂದ ನಂದೆಣ್ಣವರ, ಪ್ರಕಾಶ ಕೊಂಚಿಗೇರಿಮಠ, ಟಾಕಪ್ಪ ಸಾತಪೂತೆ, ಎಂ.ಆರ್.ಪಾಟೀಲ, ಅಪ್ಪಣ್ಣ ಮುಳಗುಂದ, ಇತರರಿದ್ದರು.