ಗದಗ ವೀರೇಶ್ವರ ಪುಣ್ಯಾಶ್ರಮದದಲ್ಲಿ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಭ್ರಮದಿಂದ ಮಹಾರಥೋತ್ಸವ Maharathotsava ನೆರವೇರಿತು.  
ಗದಗ

Maharathotsava ಸಂಭ್ರಮದ ವೀರೇಶ್ವರ ಪುಣ್ಯಾಶ್ರಮ ಮಹಾರಥೋತ್ಸವ

ಗದಗ: ವೀರೇಶ್ವರ ಪುಣ್ಯಾಶ್ರಮದ ಪಂ.ಪಂಚಾಕ್ಷರ ಗವಾಯಿಗಳವರ 82ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಭ್ರಮದ ಮಹಾರಥೋತ್ಸವ Maharathotsava ನೆರವೇರಿತು.
ವೀರೇಶ್ವರ ಪುಣ್ಯಾಶ್ರಮದಿಂದ ಎಪಿಎಂಸಿ ಪ್ರಾಂಗಣದ ದ್ವಾರಬಾಗಿಲು ಬಳಿಯ ಪಾಜಾಗಟ್ಟೆಯವರೆಗೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ಉದ್ದಕ್ಕೂ ಪುಟ್ಟಯ್ಯಜ್ಜ ಹಾಗೂ ಪಂಚಾಕ್ಷರಿ ಗವಾಯಿಗಳಿಗೆ ಜೈಕಾರ ಮೊಳಗಿದವು. ಮಹಾ ರಥೋತ್ಸವದ ಮೆರವಣಿಗೆಯಲ್ಲಿ ಕರಡಿ ಮಜಲು, ಜಾಂಜ್ ಮೇಳ, ಚಂಡಿ ಮದ್ದಳೆ, ನಂದಿಕೋಲ ಸಮ್ಮಾಳ ಮೇಳ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ಮೇಳಗಳು ಎಲ್ಲರ ಗಮನ ಸೆಳೆದವು.
ಅನ್ನ ಸಂತರ್ಪಣೆ: ಉಭಯ ಗುರುಗಳ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಭವ್ಯ ಮೆರವಣಿಗೆ: ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಪಂ.ಪಂಚಾಕ್ಷರ ಗವಾಯಿಗಳು ಹಾಗೂ ಪಂ.ಪುಟ್ಟರಾಜ ಗವಾಯಿಗಳವರ ಭಾವಚಿತ್ರ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ರಂಗೋಲಿ ಚಿತ್ತಾರವನ್ನು ಬಿಡಿಸಿ ಭಕ್ತಿಭಾವ ಮೆರೆದರು. ಮೆರವಣಿಯಲ್ಲಿ ವಿವಿಧ ಜನಾಪದ ಕಲಾತಂಡಗಳು ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಸಂಭ್ರಮದ ಮಹಾರಥೋತ್ಸವ: ಭಾನುವಾರ ಜೇಷ್ಠ ಬಹುಳ ಪಂಚಮಿ ದಿವಸ ಹರ-ಗುರು-ಚರಮೂರ್ತಿಗಳು ರಥಕ್ಕೆ ಚಾಲನೆ ನೀಡಿದರು. ನಾಡಿನ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ತೇರಿಗೆ ಗುರುಕುಮಾರ ಪಂಚಾಕ್ಷರ ಪುಟ್ಟರಾಜೇಶ್ವರ ಎಂಬ ಜಯಘೋಷದೊಂದಿಗೆ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ಸೇರಿದಂತೆ ಫಲಪುಷ್ಪಗಳನ್ನು ತೇರಿಗೆ ಸರ್ಮಪಿಸಿ ಧನ್ಯತಾ ಭಾವ ಮೆರೆದರು.
ಮಠಕ್ಕೆ ಸಾವಿರ ಭಕ್ತರ ಆಗಮನ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯ ಗುರುಗಳ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ನಾನಾ ಭಾಗದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದರು. ಹೀಗಾಗಿ ಮಠದಲ್ಲಿ ಶ್ರೀಗಳು ಗದ್ದುಗೆ ದರ್ಶನ ಪಡೆದರು. ಭಕ್ತರು ಸರದಿ ಸಾಲಿನಲ್ಲಿ ಉಭಯ ಗುರುಗಳ ದರ್ಶನ ಪಡೆದರು. ಕಳೆದ ನಾಲ್ಕು ದಿನಗಳಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಭಯಗಳು ಗುರುಗಳ ಸ್ಮರಣೆ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪಂಚಾಕ್ಷರ ಗವಾಯಿಗಳವರ ಹಾಗೂ ಡಾ.ಪುಟ್ಟರಾಜರ ಕವಿ ಗವಾಯಿಗಳವರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೀಗಾಗಿ ದೇವಸ್ಥಾನದಲ್ಲಿ ಉಭಯ ಗುರುಗಳ ಸ್ಮರಣೆ ಮಾಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಮಠಕ್ಕೆ ಆಗಮಿಸಿದ್ದರು. ಮಠದ ಆವರಣದಲ್ಲಿ ವಿವಿಧ ಸಂಗೀತ ಕಲಾ ತಂಡದಿಂದ ಉಚಿತ ಸಂಗೀತ ಕಾರ್ಯಕ್ರಮ ನಡೆದವು.