road ಮುಂಡರಗಿ ಪಟ್ಟಣದ ಮುರ್ಲಾಪೂರ, ಘಟ್ಟಿರಡ್ಡಿಹಾಳ ರಸ್ತೆ ಹದಗೆಟ್ಟಿದೆ.
ಮುಂಡರಗಿ: ಪಟ್ಟಣದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ (Road ) ಮಾರ್ಗವಾಗಿ ಮುರ್ಲಾಪುರ ಗ್ರಾಮಕ್ಕೆ ತೆರಳುವ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ತೀರ ಹದಗೆಟ್ಟಿದ್ದು, ತಗ್ಗು-ಗುಂಡಿಗಳಿಂದ ಕೂಡಿದೆ. ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತುಂಬಾ ಕಿರಿಕಿರಿ ಅನುಭವಿಸುವಂತಾಗಿದೆ.
ಕೊಪ್ಪಳ ತಾಲೂಕಿನ ಮುರ್ಲಾಪುರ, ಘಟ್ಟಿರಡ್ಡಿಹಾಳ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಪ್ರತಿದಿನ ಹೆಚ್ಚು ಸಂಖ್ಯೆಯಲ್ಲಿ ಬೈಕ್, ಕಾರು, ಟ್ರಾೃಕ್ಟರ್, ಬಸ್ ಇನ್ನಿತರ ವಾಹನಗಳು ಸಹ ಸಂಚರಿಸುತ್ತವೆ. ಹಲವು ತಿಂಗಳಿಂದ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ತೀರ ತೊಂದರೆಯಾಗುತ್ತಿದೆ.ಗ್ರಾಮೀಣ ಭಾಗದಿಂದ ಬರುವ ಶಾಲಾ ಮಕ್ಕಳು, ಗರ್ಭಿಣಿಯರು, ವೃದ್ಧರು ಇಂತಹ ರಸ್ತೆ ಮಾರ್ಗವಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುತ್ತದೆ. ಬೈಕ್ ಸವಾರರು ತಗ್ಗು ಗುಂಡಿಯಲ್ಲಿ ಬಿದ್ದು ಗಾಯಗೊಂಡ ಘಟನೆ ಸಹ ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದೇ ನಿರ್ಲಕ್ಷೃ ವಹಿಸುತ್ತಿದ್ದಾರೆ. ತಕ್ಷಣ ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.