ನರಗುಂದ ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ಸಿದ್ಧಾಂತ ಶಿಖಾಮಣಿ ಮಾಸಿಕ ಶಿವಾನುಭವ ಗೋಷ್ಠಿ ಶನಿವಾರ ಜರುಗಿತು. ನಂದೀಶ ಮಠದ, ದೀಪಾ ಗವಿಮಠ, ಸಿ.ಎಸ್. ಸಾಲೂಟಗಿಮಠ, ಶಂಕ್ರಯ್ಯ ಹಿರೇಮಠ, ಇತರರಿದ್ದರು. 
ಗದಗ

Siddhantha ಸನ್ಮಾರ್ಗ ತೋರುವ ಗ್ರಂಥ ಸಿದ್ಧಾಂತ ಶಿಖಾಮಣಿ

ನರಗುಂದ: ಸಿದ್ಧಾಂತ ಶಿಖಾಮಣಿ ಇಡೀ ಮನುಕುಲಕ್ಕೆ ಸನ್ಮಾರ್ಗ ತೋರುವ ದಾರ್ಶನಿಕ ಗ್ರಂಥವಾಗಿದೆ. 16 ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ಸಮಾಜದ ಪ್ರತಿಯೊಬ್ಬರೂ ಇದರ ಮಹತ್ವವನ್ನರಿತು ವೀರಶೈವ ಧರ್ಮದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಶಿಕ್ಷಕಿ ದೀಪಾ ಗವಿಮಠ ಹೇಳಿದರು.
ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘10ನೇ ಶತಮಾನದಲ್ಲಿ ರಚಿತಗೊಂಡಿರುವ ಸಿದ್ಧಾಂತ ಶಿಖಾಮಣಿ ವೀರಶೈವ ಸಮಾಜದ ಪವಿತ್ರ ಧರ್ಮ ಗ್ರಂಥವಾಗಿದೆ. ಇದನ್ನು ಸರಿಯಾಗಿ ಅಧ್ಯಯನ ಮಾಡದ ಜನರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತಿದೆ. ಇನ್ಮುಂದೆ ನರಗುಂದ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿ ತಿಂಗಳು ಸಿದ್ಧಾಂತ ಶಿಖಾಮಣಿ ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಎಲ್ಲ ಗೊಂದಲಗಳಿಗೆ ಶಾಶ್ವತ ಮುಕ್ತಿ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ ಮಾತನಾಡಿ, ಸಮಾಜದ ಎಲ್ಲ ಸಿದ್ಧಾಂತಗಳಿಗಿಂತ ಮೇಲಿನ ಸ್ತರದಲ್ಲಿರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥವನ್ನು ಸಿದ್ಧಾಂತ ಶಿಖಾಮಣಿ ಎಂದು ಕರೆಯಲಾಗಿದೆ. ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥವು ಸಿದ್ಧಾಂತ ಶಿಖಾಮಣಿ. ಇದು ಕೇವಲ ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮದವರೂ ಇದನ್ನು ಓದುವುದರಿಂದ ಇದನ್ನು ಜಾಗತಿಕ ಧರ್ಮ ಗ್ರಂಥ ಎನ್ನಲಾಗಿದೆ. ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು ಎಂದು ತಿಳಿಸಿದರು.
ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಮಾಜದ ಅಧ್ಯಕ್ಷ ನಂದೀಶ ಮಠದ, ಶಿವಶಂಕ್ರಯ್ಯ ಹಿರೇಮಠ, ಶಿವಯ್ಯ ಅಲ್ಲಮ ಪ್ರಭುದೇವಮಠ, ಜಗದೀಶ ಗವಿಮಠ, ಶಿವಾನಂದ ಮಣ್ಣೂರಮಠ, ಕುಮಾರ ಗುರಪ್ಪಗೌಡ್ರ, ಲತಾ ಹಡಗಲಿಮಠ, ಲತಾ ಹುಬ್ಬಳ್ಳಿಮಠ, ನೇತ್ರಾ ಮಾಲಿನಮಠ, ಲಕ್ಷ್ಮೀ ಸಂಗಳಮಠ, ಶಾಲಿನಿ ಗವಿಮಠ, ಕವಿತಾ ವಸ್ತ್ರದ, ಎಸ್.ಬಿ. ಹಿರೇಮಠ, ಶಾರದಾ ಹಿರೇಮಠ, ಚಂದ್ರಯ್ಯ ಹಿರೇಮಠ, ನಂದಾ ಗುಡ್ಡಾಪೂರಮಠ ಇತರರಿದ್ದರು.