ನರೇಗಲ್ಲನ ಬಸ್ ನಿಲ್ದಾಣದ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಲಾರ್ವಾ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಲಾಯಿತು. 
ಗದಗ

Awareness: ನೀರಿನ ಟ್ಯಾಂಕ್‌ ಸ್ವಚ್ಛವಾಗಿಟ್ಟುಕೊಳ್ಳಿ

ಮಂಜುನಾಥ ಗದಗಿನ
ನರೇಗಲ್ಲ: ಹಸಿ ಕಸ, ಎಳನೀರು ಚಿಪ್ಪು, ಪ್ಲಾಸ್ಟಿಕ್ ಕಪ್ ಹಾಗೂ ತ್ಯಾಜ್ಯದ ತೊಟ್ಟಿಗಳಲ್ಲಿ ನೀರು ನಿಂತು ಡೆಂೆ, ಚಿಕೂನ್‌ಗುನ್ಯಾ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನು ಪತ್ತೆ ಹಚ್ಚುವುದೇ ಲಾರ್ವಾ ಸಮೀಕ್ಷೆಯ ಮುಖ್ಯ ಉದ್ದೇಶ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನರೇಗಲ್ಲ ಪ.ಪಂ ಸಹಯೋಗದಲ್ಲಿ ಶುಕ್ರವಾರ ನಡೆದ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಲಾರ್ವಾ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿ, ಹಸಿ ಮತ್ತು ಒಣ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸದೆ ಎಲ್ಲೆಂದರಲ್ಲಿ ಎಸೆಯಬಾರದು. ಮಳೆ ನೀರು, ನೀರಿನ ಟ್ಯಾಂಕ್‌ನಲ್ಲಿ ನಿಂತ ನೀರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಆದಷ್ಟು ಸಾರ್ವಜನಿಕರು ಮನೆಯ ಮುಂದೆ ಹಾಗೂ ಓಣಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಚಿದಾನಂದ ಮುಂಡಾಸದ ಮಾತನಾಡಿ, ಈಗ ಮಳೆಗಾಲ ಪ್ರಾರಂಭವಾಗಿದ್ದು, ಮಳೆ ಸುರಿಯುತ್ತಿರುವ ಕಾರಣ ಅಲ್ಲಲ್ಲಿ ಇರುವ ಗುಂಡಿ, ನೀರಿನ ತೊಟ್ಟಿಗಳಲ್ಲಿ ಮತ್ತು ಘನ ತ್ಯಾಜ್ಯಗಳು ಇರುವ ಕಡೆಯಲೆಲ್ಲ ನೀರಿನಲ್ಲಿ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿದೆ. ಇದರಿಂದ ಡೆಂೆ ಪ್ರಕರಣಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದಿರುವುದು, ಜನರ ನಿರ್ಲಕ್ಷ್ಯದಿಂದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಕಲ್ಲಪ್ಪ ಬೂದಿಹಾಳ, ಪಡಿಯಪ್ಪ ಹಳಗೇರಿ, ಸಂಗೀತಾ ಮುಚಖಂಡಿ, ವಿಜಯಲಕ್ಷ್ಮೀ ಪೊಲೀಸ್‌ಪಾಟೀಲ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಗೂ ಪಪಂ ಸಿಬ್ಬಂದಿ ಇದ್ದರು.