- ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
- ನಿಂಗಪ್ಪ ಬಸಪ್ಪ ಬಡ್ಲಿ
- ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಹೆಬ್ಬಾಳ ಗ್ರಾಮ
ನರಗುಂದ: ಸಾಲಬಾಧೆ ತಾಳಲಾರದೆ ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಸುರಕೋಡ ಒಳರಸ್ತೆಯ ಜಮೀನಿನಲ್ಲಿ ಇತ್ತೀಚೆಗೆ ನಡೆದಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಹೆಬ್ಬಾಳ ಗ್ರಾಮದ ನಿಂಗಪ್ಪ ಬಸಪ್ಪ ಬಡ್ಲಿ (42) ಆತ್ಮಹತ್ಯೆ ಮಾಡಿಕೊಂಡ ರೈತ.
ನಿಂಗಪ್ಪ ಅಳಗವಾಡಿಯ ಕೆವಿಜಿ ಬ್ಯಾಂಕ್‌ನಲ್ಲಿ 2 ಲಕ್ಷ ರೂ. ಬೆಳೆಸಾಲ ಪಡೆದಿದ್ದ. ಲಾವಣಿ ಹೊಲ ಮಾಡಿದ್ದರಿಂದ ಖಾಸಗಿ ವ್ಯಕ್ತಿಗಳಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಆದರೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಸರಿಯಾಗಿ ಬಾರದೇ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಜೀವನ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೃತನ ಪತ್ನಿ ಫಕೀರಪ್ಪ (ಕಲ್ಲವ್ವ) ನಿಂಗಪ್ಪ ಬಡ್ಲಿ ನರಗುಂದ ಠಾಣೆಗೆ ದೂರು ನೀಡಿದ್ದಾರೆ.