SSLC ಲಕ್ಷ್ಮೇಶ್ವರ ತಾಲೂಕು ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ಮಕ್ಕಳು ತಾಯಂದಿರ ಪಾದಪೂಜೆ ಮಾಡಿದರು 
ಗದಗ

SSLC ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ತಾಯಂದಿರ ಪಾದಪೂಜೆ

ಲಕ್ಷ್ಮೇಶ್ವರ: ತಾಲೂಕಿನ ಯಲ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಮಕ್ಕಳು ಪರೀಕ್ಷೆಯಲ್ಲಿ ಯಶಸ್ವಿ ಸಾಧಿಸುವಂತೆ (SSLC) ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲಕರು, ಶಿಕ್ಷಕರು ಶುಭಕೋರುವ ವಿಶಿಷ್ಟ ಕಾರ್ಯಕ್ರಮದ ಜತೆ ತಾಯಿಯ ಪಾದಪೂಜೆ ನೆರವೇರಿಸುವ ಕಾರ್ಯವೂ ನೆರವೇರಿತು.
ದೊಡ್ಡೂರು ಕ್ಲಸ್ಟರ್ ಮಟ್ಟದ ಸಿಆರ್‌ಪಿ ಶಿವಾನಂದ ಅಸುಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಜೀವನದ ಭದ್ರ ಬುನಾದಿ ಆಗಿರುವುದರಿಂದ ಉತ್ತಮ ಅಂಕ ಪಡೆದು ಗುರಿ ಸಾಧನೆಯತ್ತ ಸಾಗಬೇಕು ಎಂದರು.
ಶಿಕ್ಷಕ ಎಂ.ಎಚ್.ದಿಂಡವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೊರ್ವ ಶಿಕ್ಷಕ ಎಸ್.ಸಿ. ಹಾವೇರಿ ವರದಿ ವಾಚನ ಮಂಡಿಸಿದರು. ವರ್ಗಾವಣೆಗೊಂಡ ಶಿಕ್ಷಕರಾದ ಎಸ್.ಐ. ಮುರಡಿ, ಪಿ.ಎಸ್. ಲಚ್ಚಾಣ, ಎ.ಐ. ಡಂಬಳ ಅವರು ತಲಾ 25 ಸಾವಿರ ಊ. ಶಾಲಾ ದತ್ತಿ ನಿಧಿಗೆ ದೇಣಿಗೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತಗೌಡ್ರ ಭರಮಗೌಡ್ರ, ಮುಖ್ಯಗುರುಗಳಾದ ಬಿ.ಎನ್. ಗಾಯಕವಾಡ, ನಿಂಗಪ್ಪ ಮತ್ತೂರ, ಸಂಗಮೇಶ ಅಂಗಡಿ, ವಿ.ಜಿ. ಜೊಗೋಜಿ, ಎಸ್.ಬಿ.ಹಿರೇಮಠ, ವಿನೋದಾ ಗೋಣಿ, ವಿದ್ಯಾ ತೆಳಗಿನಮನಿ, ಸಿ.ಆರ್. ಮೂಲಿಮನಿ, ಪ್ರವೀಣ ಭಜಂತ್ರಿ, ರಾಜು ಅಂಗಡಿ, ಹಾಜರಿದ್ದರು.