ನರೇಗಲ್ಲ ಪಟ್ಟಣದ ಶ್ರೀರಾಮ (RAM NAVAMI)ಮಂದಿರದಲ್ಲಿ ಶ್ರೀರಾಮನ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು. ಪ್ರತೀಕ್ಷಾ ಕುಲಕರ್ಣಿ, ಶೋಭಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಸೀಮಾ ಕೊಂಡಿ, ಅರ್ಚನಾ ಕುಲಕರ್ಣಿ, ರಾಜಶ್ರೀ ಕುಲಕರ್ಣಿ ಇತರರು ಇದ್ದರು. 
ಗದಗ

RAM NAVAMI: ರಾಮನಾಮದಲ್ಲಿದೆ ಜೀವನ್ಮುಕ್ತಿಯ ಶಕ್ತಿ

ಸೋಮನಾಥ ರೆಡ್ಡಿ
ನರೇಗಲ್ಲ: ರಾಮನಾಮ (RAM NAVAMI) ಎನ್ನುವುದು ಮಹಾಮಂತ್ರ. ಇದರಲ್ಲಿ ಜೀವನ್ಮುಕ್ತಿಯನ್ನು ನೀಡುವ ಶಕ್ತಿ ಅಡಗಿದೆ ಎಂದು ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ರಾಮದೇವರ ಮಂದಿರದಲ್ಲಿ ಶುಕ್ರವಾರ ಆಚರಿಸಲಾದ ಶ್ರೀರಾಮನವಮಿ ಉತ್ಸವದಲ್ಲಿ ಅವರು ಮಾತನಾಡಿದರು.
ಶ್ರೀರಾಮನ ಜನನದೊಂದಿಗೆ ಈ ಭೂಮಿಯ ಮೇಲೆ ಅನೇಕ ಆದರ್ಶ ಗುಣಗಳು, ಮಾನವೀಯ ಮೌಲ್ಯಗಳು ಮೂಡಿಬಂದವು. ತಂದೆ-ತಾಯಿಯಗಳ ಮಾತನ್ನು ಪಾಲಿಸುವುದು ಹೇಗೆ ಎಂಬುದನ್ನು ಶ್ರೀರಾಮ ನಮಗೆ ಬಾಳಿ ಬದುಕಿ ತೋರಿಸಿದ್ದಾನೆ. ಕೊಟ್ಟ ಮಾತಿನಂತೆ ನಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದಾನೆ. ದುಷ್ಟರನ್ನು ಶಿಕ್ಷಿಸುವುದು ಶಿಷ್ಟರನ್ನು ರಕ್ಷಿಸುವುದು ಶ್ರೀರಾಮನ ಗುಣಗಳಾಗಿದ್ದವು. ಅದಕ್ಕಾಗಿಯೇ ಆತ ಕೈಯಲ್ಲಿ ಕೋದಂಡವನ್ನು ಧರಿಸಿದ್ದ. ಬಿಲ್ಲಿಗೆ ಇನ್ನೊಂದು ಹೆಸರೇ ಕೋದಂಡ. ಅದಕ್ಕಾಗಿಯೇ ಶ್ರೀರಾಮನನ್ನು ಕೋದಂಡರಾಮನೆಂದು ಕರೆಯಲಾಗುತ್ತದೆ ಎಂದರು.
ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಶ್ರೀರಾಮನ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸುಮಂಗಲೆಯರು ತೊಟ್ಟಿಲೋತ್ಸವ ನೆರವೇರಿಸಿದರು. ಪ್ರಶಾಂತ ಗ್ರಾಮಪುರೋಹಿತ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಪವನ ಕುಲಕರ್ಣಿ, ಎ. ಟಿ. ಮಳ್ಳಳ್ಳಿ, ರಾಮಕೃಷ್ಣ ಸದರಜೋಷಿ, ನಾಗರಾಜ ನಾಡಗೇರ, ನಾಗೇಶಭಟ್ಟ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ಪ್ರತೀಕ್ಷಾ ಕುಲಕರ್ಣಿ, ಶೋಭಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಸೀಮಾ ಕೊಂಡಿ, ಅರ್ಚನಾ ಕುಲಕರ್ಣಿ, ರಾಜಶ್ರೀ ಕುಲಕರ್ಣಿ ಇತರರಿದ್ದರು.