ನರಗುಂದ ದಂಡಾಪೂರ ಬಡಾವಣೆಯ ಐತಿಹಾಸಿಕ ಶ್ರೀರಾಮ (SRIRAM) ಮಂದಿರದಲ್ಲಿ ಶ್ರೀರಾಮ-ಲಕ್ಷ್ಮಣ, ಭರತ, ಸೀತಾಮಾತೆ ಮೂರ್ತಿಗಳಿಗೆ ಹೂವು, ಹಣ್ಣುಗಳಿಂದ ಸಿಂಗರಿಸಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. 
ಗದಗ

SRIRAM: ಶ್ರೀರಾಮ ಮಂದಿರದಲ್ಲಿ ಫಲ-ಪುಷ್ಪಗಳಿಂದ ವಿಶೇಷ ಅಲಂಕಾರ

ನರಗುಂದ: ಪಟ್ಟಣದ ದಂಡಾಪೂರ ಪಡುವಗೊಂಡನ ಕೆರೆ ಹತ್ತಿರದ ಐತಿಹಾಸಿಕ ಶ್ರೀರಾಮ ಮಂದಿರದಲ್ಲಿ (SRIRAM) ಶ್ರೀರಾಮ ನವಮಿಯನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀರಾಮ-ಲಕ್ಷ್ಮಣ, ಭರತ ಹಾಗೂ ಸೀತಾಮಾತೆಯ ಮೂರ್ತಿಗಳನ್ನು ಸೇಬು, ಫೈನಾಪಲ್, ಕಿತ್ತಳೆ, ಬಾಳೆ ಹಣ್ಣು, ತಳೀರು-ತೋರಣ ಹಾಗೂ ವಿವಿಧ ಫಲಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. 
ಶ್ರೀರಾಮನಿಗೆ ಮಹಾಭಿಷೇಕ, ಸಾಮೂಹಿಕ ರಾಮನಾಮ ಜಪ, ತೊಟ್ಟಿಲೋತ್ಸವ, ಭಜನೆ ಕಾರ್ಯಕ್ರಮ ಜರುಗಿದವು. 
ಸಂದೀಪ ಸುಬೇದಾರ, ಉಮೇಶಗೌಡ ಪಾಟೀಲ, ಡಾ.ಸಂಗಮೇಶ ಕೊಳ್ಳಿಯವರ, ಕುಮಾರ ಬೆಳವಟಗಿ, ಈರಣ್ಣ ನವಲಗುಂದ, ಭಜಂತ್ರಿ, ಮಹೇಶ ನಡುವಿನಮನಿ, ಯೋಗೇಶ ಗುಡಾರದ, ಇತರರಿದ್ದರು.