Sparrows ನರಗುಂದ ತಾಲೂಕಿನ ಕಣಕಿಕೊಪ್ಪದ ಎನ್‌ಸಿಕೆ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಬಿದಿರಿನ ಗೂಡು, ಮಣ್ಣಿನ ಪಾತ್ರೆಗಳನ್ನು ವಿತರಿಸಲಾಯಿತು. 
ಗದಗ

Sparrows ಗುಬ್ಬಚ್ಚಿಗಳಿಂದ ಜೀವ ವೈವಿಧ್ಯದ ಉಳಿವು

ಮಂಜುನಾಥ ಕೆಂಪಸಣ್ಣವರ
ನರಗುಂದ: ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ (Sparrows ) ಪಾತ್ರ ಮಹತ್ವದ್ದಾಗಿದೆ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾನಿ ಮಾಡುವ ಸಣ್ಣ-ಪುಟ್ಟ ಕೀಟಗಳು, ಮರಿಹುಳ ಸೇರಿದಂತೆ ವಿವಿಧ ಹುಳುಗಳನ್ನು ಭಕ್ಷಿಸುತ್ತವೆ. ವಿಶೇಷವಾಗಿ ಗುಬ್ಬಚ್ಚಿ ತಮ್ಮ ಮರಿಗಳಿಗೆ ಆಹಾರ ನೀಡುವಾಗ ಹಾನಿಕಾರಕ ಕೀಟಗಳನ್ನು ಹೆಚ್ಚಾಗಿ ಬೇಟೆ ಆಡುವುದರಿಂದ ರೈತರಿಗೆ ಸಹಕಾರಿಯಾಗಿವೆ ಎಂದು ಮಂಚೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ಹೇಳಿದರು.
ತಾಲೂಕಿನ ಕಣಕಿಕೊಪ್ಪ ಗ್ರಾಮದ ಎನ್‌ಸಿಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಸಿರು ಶಕ್ತಿ ಇಕೋ ಕ್ಲಬ್, ಸ್ಪಾೃರೋ ಕನ್ಸರ್‌ವೇಷನ್ ಫೌಂಡೇಷನ್, ಗದಗ, ದಾವಣಗೆರೆ ಸಹಯೊಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಸರದಲ್ಲಿ ಗುಬ್ಬಚ್ಚಿಗಳ ಮಹತ್ವದ ಪಾತ್ರಗಳ ಕುರಿತು ಅವರು ಮಾತನಾಡಿದರು.
ಗುಬ್ಬಚ್ಚಿಗಳು ಕೇವಲ ಮುದ್ದಾದ ಪಕ್ಷಿಗಳಲ್ಲ. ಅವು ಪರಿಸರ ಆರೋಗ್ಯದ ಸಂಕೇತಗಳಾಗಿವೆ. ಪರಿಸರದಲ್ಲಿನ ಸಸ್ಯ, ಬೀಜಗಳನ್ನು ತಿಂದು ಅವುಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತವೆ. ಇದು ಪರಿಸರದಲ್ಲಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಕಾಂಕ್ರೀಟ್ ಕಾಡು, ಮೊಬೈಲ್, ವಿವಿಧ ತರಂಗಗಳ ಉಪಟಳದಿಂದ ಕ್ಷಿಣಿಸುತ್ತಿರುವ ಗುಬ್ಬಚ್ಚಿಗಳ ಸಂರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಯಾಗಿದೆ ಎಂದು ತಿಳಿಸಿದರು.
ಜೀವವೈವಿಧ್ಯ ಸಂಶೋಧಕ ಮಂಜುನಾಥ ಮಾತನಾಡಿ, ಪಕ್ಷಿ ಸಂಕುಲದ ಉಳಿವಿಗಾಗಿ ಮನೆಯ ಅಂಗಳ, ತಾರಸಿ ಮೇಲೆ ನೀರು ತುಂಬಿದ ಮಡಕೆ, ಮಣ್ಣಿನ ಪಾತ್ರೆಗಳನ್ನಿಟ್ಟು ಅವುಗಳ ದಾಹ ನೀಗಿಸಲು ಅನಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಶಿಕ್ಷಕ ಎಸ್.ಎಲ್.ಮರಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಸಾಗರ ನಿರ್ದೇಶನದ ಕೌತುಕ ಮಂಗಟ್ಟೆ ಕಿರುಚಿತ್ರ ಪ್ರದಶಿ9ಸಲಾಯಿತು.