ನರಗುಂದದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪರಪ್ಪ ವಾಳದ ಮಾತನಾಡಿದರು. ವಾಸಣ್ಣ ಬೋನಗೇರಿ, ಸಂಗಣ್ಣ ಕಳಸಾ, ಇತರರಿದ್ದರು.  
ಗದಗ

ನರಗುಂದದಲ್ಲಿ ಶೋಭಾಯಾತ್ರೆ 18ರಂದು

ನರಗುಂದ: ಪಟ್ಟಣದಲ್ಲಿ ಜ.18ರಂದು ಹಿಂದೂ ಸಮ್ಮೇಳನದ ಭವ್ಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಕಲ ಸಿದ್ಧತೆ  ಮಾಡಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪರಪ್ಪ ವಾಳದ ಹೇಳಿದರು. 
ಶೋಭಾಯಾತ್ರೆ ಪೂರ್ವಸಿದ್ಧತೆ ಕುರಿತು ಪಟ್ಟಣದ ಜಗನ್ನಾಥ ಸ್ಮಾರಕ ಭವನದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ, ಧರ್ಮ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಇದಕ್ಕಾಗಿ ನಗರದ ಎಲ್ಲ ಹಿಂದೂ ಸಮಾಜ ಬಾಂಧವರು, ಮುಖಂಡರನ್ನು ಆಹ್ವಾನಿಸಲಾಗಿದೆ. ಸಮಾಜದ ಪ್ರತಿಯೊಬ್ಬ ಹಿಂದೂವನ್ನು ಒಗ್ಗೂಡಿಸಿ ಸದೃಢ ಭಾರತವನ್ನು ಕಟ್ಟುವ ಸದುದ್ದೇಶ ಹೊಂದಲಾಗಿದೆ ಎಂದರು.
ಸಮಿತಿ ಅಧ್ಯಕ್ಷ ವಾಸಣ್ಣ ಬೋನಗೇರಿ, ತಾಲೂಕು ಸಂಯೋಜಕ ಸಂಗಣ್ಣ ಕಳಸಾ ಮಾತನಾಡಿ, 18ರಂದು ಪಟ್ಟಣದ ದಂಡಾಪೂರ ಬಡಾವಣೆಯ ಶ್ರೀಉಡಚಾ ಪರಮೇಶ್ವರಿ ದೇವಸ್ಥಾನದಿಂದ ಮಧ್ಯಾಹ್ನ 3 ಗಂಟೆಗೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.
ಮಂಜುನಾಥ ಬೆಳಗಾವಿ, ವಿಠಲ ಕಾಪ್ಸೆ, ಮಂಜುನಾಥ ಮೆಣಸಗಿ, ಶ್ರೀನಿವಾಸಪ್ರಸಾದ ಗುಜಮಾಗಡಿ, ವಿನಾಯಕ ಬೆಳಮಕರ, ವಿವಿಧ ಹಿಂದೂಪರ ಸಂಘಟಣೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.