ಶಿರಹಟ್ಟಿ ಉತ್ಸವ ಗಾರ್ಡನ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿದರು. ಎಂ.ಕೆ. ಲಮಾಣಿ, ಉಮೇಶ ದೊಡ್ಡಮನಿ, ಚಂದ್ರ ಸ್ವಾಮಿ, ಗೂಳಪ್ಪ ಕರಿಗಾರ, ಮಂಜುನಾಥ ರಿತ್ತಿ, ಶ್ರೀನಿವಾಸ ಕಪಟಕರ, ಫಕೀರೇಶ ನಿಟ್ಟಳೆ, ಸಂತೋಷ ಕೋಳಿ ಇತರರಿದ್ದರು. 
ಗದಗ

ಗುರು ಕಾರುಣ್ಯವೇ ಬದುಕಿನ ಸದಾಚಾರ guruvandane

ಪ್ರಮುಖ ಮುಖ್ಯಾಂಶಗಳು

  • ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಅಭಿಮತ
  • ಗುರುವಂದನೆ ಕಾರ್ಯಕ್ರಮ
ಶಿರಹಟ್ಟಿ: ಗುರು ಕಾರುಣ್ಯವೇ ಸದಾಚಾರ, ಶಿವಾಚಾರ ಪರಮ ಪ್ರಸಾದ. ಗುರು ಇದ್ದರೆ ದೀಕ್ಷೆ ಹಾಗೂ ಪರಮಾತ್ಮನ ಕೃಪೆ ಪಡೆಯಲು ಸಾಧ್ಯ ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಉತ್ಸವ ಗಾರ್ಡನ್‌ನಲ್ಲಿ ಭಾನುವಾರ ಆಯೋಜಿಸಿದ್ದ 2004-05ನೇ ಸಾಲಿನ ಎಫ್.ಎಂ. ಡಬಾಲಿ ಹಾಗೂ ಎಂ.ಎಫ್. ಡಬಾಲಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ‘ಗುರುವಂದನಾ ಹಾಗೂ ಸ್ನೇಹ ಸಮೇಳನ’ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದ ಶ್ರೀಗಳು, ನಾನು ಸಹ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿದೆ. ನಮ್ಮ ಶಿಕ್ಷಕರು ಕೇವಲ ಪಠ್ಯವನ್ನು ಬೋಧಿಸಲಿಲ್ಲ, ಬದಲಾಗಿ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕಲಿಸಿಕೊಟ್ಟರು ಎಂದರು.
ನಮ್ಮ ಬದುಕನ್ನು ಮಾದರಿಯಾಗಿ ರೂಪಿಸಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಗುರು ಸ್ಮರಣೆಯು ಅತಿ ಶ್ರೇಷ್ಠವಾದ ದಿವ್ಯ ಮಂತ್ರವಾಗಿದೆ. ‘ಹರ ಮುನಿದರು ಗುರು ಕಾಯುವನು’ ಎಂಬಂತೆ ಗುರುವಿನ ಸ್ಥಾನ ಅತ್ಯುನ್ನತವಾದುದು ಎಂದು ಮಾರ್ಮಿಕವಾಗಿ ನುಡಿದರು.
ತಮಗೆ ಅಕ್ಷರ ಕಲಿಸಿದ ಗುರುಗಳಾದ ನಾರಾಯಣ ಮಹೇಂದ್ರಕರ, ಎಂ.ಕೆ. ಲಮಾಣಿ, ಗಂಗಮ್ಮ ಕರಕೆಣ್ಣವರ, ಜಯತೀರ್ಥ ಕುಲಕರ್ಣಿ, ಚನ್ನಪ್ಪ ಸಂಕದಾಳ, ಪದ್ಮರಾಜ ಬಸ್ತಿ, ಶಶಿಕಲಾ ಹೊಸಮನಿ, ಶಂಕರ ಕುಂದಿ, ಎಸ್.ಎಸ್. ಪಾಟೀಲ, ಎಂ.ಎಂ. ಹುಡೇದಮನಿ, ಲಾಲಪ್ಪ ನಾಯಕ್, ಬಸವರಾಜ ಚಿಂಚಲಿ, ಬಿ.ಬಿ. ಬಾಬು ಖಾನರ, ರಮೇಶ್ ಬಟಗುರ್ಕಿ, ಶಿವಯೋಗಿ ಶೆಟ್ಟಿರ್ ಮತ್ತು ನಿಂಗಪ್ಪ ಉಡಚಗೊಂಡ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಸುಮಾರು ಎರಡು ದಶಕಗಳ ನಂತರ ಒಂದೆಡೆ ಸೇರಿದ ಸ್ನೇಹಿತರು ಹಳೆಯ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಗೂಳಪ್ಪ ಕರಿಗಾರ, ಮಂಜುನಾಥ ರಿತ್ತಿ, ಶ್ರೀನಿವಾಸ ಕಪಟಕರ, ಉಮೇಶ ಅತ್ತಿಗೇರಿ, ವಿಠ್ಠಲ ಬಿಡವೆ, ಮುತ್ತು ತೆಗ್ಗಿನಹಳ್ಳಿ, ಫಕೀರೇಶ ರಟ್ಟಿಹಳ್ಳಿ, ಚಂದ್ರು ಸ್ವಾಮಿ, ಸಂತೋಷ ಕೋಳಿ, ಪರಶುರಾಮ ಗಾಡಿ, ಪ್ರವೀಣ ಮೂರೇಕರ, ಸಿದ್ದಪ್ಪ ಪೂಜಾರ, ಫಕೀರೇಶ ನಿಟ್ಟಳೆ, ಇಬ್ರಾಹಿಂ ಮನಿಯಾರ, ವೀರೇಶ ಬೂರಶೆಟ್ಟರ್, ವಿಶಾಲ ಮುಧೋಳಕರ, ಅಮೇರಶ ಬಳಿಗೇರ, ಸವಿತಾ ಬಸ್ತಿ, ವಿಜಯಲಕ್ಷ್ಮೀ ಮಜ್ಜಗಿ, ಮಂಗಳಗೌರಿ ಹೂಗಾರ, ಶಬಾನ್ ಕರಬೂದಿ, ರೂಪ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.