ಹೊಳೆಆಲೂರ ಕಲ್ಮೇಶ್ವರ ಹಾಗೂ ಯಚ್ಚರೇಶ್ವರ ಪ್ರೌಢ ಶಾಲೆಯಲ್ಲಿ (SERVICE) ಬುಧವಾರ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆಯಲ್ಲಿ ತೊಡಗಿದ ನಿವೃತ್ತ ಸೈನಿಕರಾದ ಮಲ್ಲಿಕಾರ್ಜುನ ಅಂಗಡಕಿ, ಮುತ್ತಣ್ಣ ಗಡಾದ, ಚನ್ನಯ್ಯ ಮಠಪತಿ, ಶರಣಪ್ಪ ಕವಾಸ್ತ, ಮುದಕಪ್ಪ ಸುಳ್ಳ್, ಯಚ್ಚರಪ್ಪ ಬಡಿಗೇರ. 
ಗದಗ

service: ಮಾಜಿ ಸೈನಿಕರಿಂದ ಭದ್ರತಾ ಸೇವೆ

ಸೋಮನಾಥ ರೆಡ್ಡಿ
ಹೊಳೆಆಲೂರ: ಮಾಜಿ ಸೈನಿಕರ ಸಂಘದ ಸಹಕಾರದೊಂದಿಗೆ ಗ್ರಾಮದಲ್ಲಿ (service) ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.
ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಮನವಿ ಮೇರೆಗೆ ರೋಣ ತಾಲೂಕು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಮಲ್ಲಿಕಾರ್ಜುನ ಅಂಗಡಕಿ ನೇತೃತ್ವದಲ್ಲಿ 21 ನಿವೃತ್ತ ಸೈನಿಕರು ಸ್ವಯಂ ಪ್ರೇರಣೆಯಿಂದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಗೆ ಉಚಿತ ಭದ್ರತಾ ಸೇವೆ ಒದಗಿಸಿದರು.
ಕಲ್ಮೇಶ್ವರ ಪ್ರೌಢ ಶಾಲೆ, ಯಚ್ಚರೇಶ್ವರ ಪ್ರೌಢ ಶಾಲೆ ಹಾಗೂ ಬೆಳವಣಕಿ ಗ್ರಾಮದ ವೀರಭದ್ರೇಶ್ವರ ಪ್ರೌಢ ಶಾಲೆಯವರು ಮನವಿ ಮಾಡಿದ್ದರಿಂದ ಹೊಳೆಆಲೂರ, ಹೊಳೆಮಣ್ಣೂರ, ಹೊಳೆಹಡಗಲಿ, ಬೆಳವಣಕಿ, ಗುಜಮಾಗಡಿ, ಸವಡಿ, ಮಲ್ಲಾಪೂರ ಗ್ರಾಮಗಳಲ್ಲಿರುವ ನಿವೃತ್ತ ಸೈನಿಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಒಂದು ಗಂಟೆ ಮುಂಚಿತವಾಗಿ ಆಗಮಿಸಿ ದೇಶ ಕಾಯಲೂ ಸಿದ್ಧ ಸಾರ್ವಜನಿಕ ಸೇವೆಗೂ ಬದ್ಧ ಎನ್ನುವಂತೆ ಭದ್ರತಾ ಸೇವೆ ಒದಗಿಸಿದರು.

ದೇಶ ಸುಭದ್ರವಾಗಿದ್ದರೆ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ. ಸಂದರ್ಭ ಬಂದರೆ ದೇಶದ ಬಾಹ್ಯ ಭದ್ರತಾ ಸಮಸ್ಯೆ ಮಾತ್ರವಲ್ಲ ಆಂತರಿಕ ಸಮಸ್ಯೆ ಕಂಡುಬಂದರೂ ಸೇವೆಗೆ ನಿವೃತ್ತ ಸೈನಿಕರು ಸದಾ ಸಿದ್ಧವಾಗಿರುತ್ತೇವೆ. ಅದು ನಮಗೆ ಹೆಮ್ಮೆಯ ಸಂಗತಿ.