seize ಲಕ್ಷ್ಮೇಶ್ವರದಲ್ಲಿ ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ್ ಹೊಂದಿದ್ದ ಬೈಕ್‌ಗಳ ಮಾಲೀಕರಿ ಸಂಚಾರ ಪೊಲೀಸರು ಪರಿಶೀಲಿಸಿ ದಂಡ ವಿಧಿಸಿದರು.
ಲಕ್ಷ್ಮೇಶ್ವರ: ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ್ ಪ್ಲೇಟ್‌ನೊಂದಿಗೆ ಪಟ್ಟಣದಲ್ಲಿ ವಾಹನ ಚಲಾಯಿಸುತ್ತಿದ್ದವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಒಂದೇ ಬೈಕ್‌ನಲ್ಲಿ ಮೂವರು, ನಾಲ್ವರು ಸವಾರರು ಸಂಚರಿಸುವುದಕ್ಕೂ ಮಂಗಳವಾರ ಬ್ರೇಕ್ (seize) ಹಾಕಿದರು.
ಶಿರಹಟ್ಟಿ ವೃತ್ತದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ನಾಗರಾಜ ಗಡದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ನೇತೃತ್ವದಲ್ಲಿ ತಂಡ ರಚಿಸಿ , ಗೃಹ ರಕ್ಷಕ ಸಿಬ್ಬಂದಿಯ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು. ಶಿಗ್ಲಿ ಕ್ರಾಸ್ ದೊಡ್ಡೂರು ರಸ್ತೆ ಪೊಲೀಸ್ ಠಾಣೆ ಮುಂಭಾಗ, ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ಮಾಡಲಾಯಿತು. ಸಿಸಿ ಕ್ಯಾಮರಾದಲ್ಲಿ ಸಾಕ್ಷೃ ದಾಖಲಾಗಿ, ಅದರಿಂದ ಬರುವ ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್‌ಗಳಿಗೆ ಒಂದು ನಂಬರ್ ಕಾಣದಂತೆ ಸ್ಟಿಕ್ಕರ್ ಅಂಟಿಸಿಕೊಂಡು ಹೋಗುತ್ತಿದ್ದ 25ಕ್ಕೂ ಹೆಚ್ಚು ಬೈಕ್‌ಗಳನ್ನು ಸಿಜ್ ಮಾಡಲಾಯಿತು.
ನೋಂದಣಿ ಸಂಖ್ಯೆ ಇಲ್ಲದ, ತಪ್ಪು ನಂಬರ್ ಪ್ಲೇಟ್ ಹಾಗೂ ಮರೆಯಾಚುವ ಸ್ಟಿಕ್ಕರ್ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಹೊಣೆ ಅರಿತು ವಾಹನ ಚಾಲನೆ ಮಾಡಬೇಕು ಎಂದು ಪಿಎಸ್‌ಐ ನಾಗರಾಜ ಗಡದ ಅನೇಕ ಸವಾರರಿಗೆ ತಿಳಿಹೇಳಿದರು.