ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. 
ಗದಗ

ಮಂತ್ರಿಗಿರಿಯ ರೇಸ್‌ನಲ್ಲಿದ್ದವರಿಗೆ ಸಭಾಧ್ಯಕ್ಷ ಪಟ್ಟ speaker gs patil

ರೋಣ:ಜಿಲ್ಲೆಯಶಾಸಕರೊಬ್ಬರಿಗೆ ವಿಧಾನಸಭೆಸ್ಪೀಕರ್ ಸ್ಥಾನ ಒಲಿದು ಬಂದಿದೆ.ಮಂತ್ರಿರೇಸ್‌ನಲ್ಲಿದ್ದ ರೋಣ ಶಾಸಕಜಿ.ಎಸ್.ಪಾಟೀಲಅವರಿಗೆ ಸ್ಪೀಕರ್ ಹುದ್ದೆನೀಡುತ್ತಿರುವುದು ಅಚ್ಚರಿಮೂಡಿಸಿದೆ.ಜಿಲ್ಲೆಯಪ್ರಭಾವಿ ರಾಜಕಾರಣಿ ಎಚ್.ಕೆ.ಪಾಟೀಲಅವರಿಗೆ ಈ ಬಾರಿ ಯಾವುದೇ ಸ್ಥಾನನೀಡದಿರುವುದು ಕಾರ್ಯಕರ್ತರಿಗೆತೀವ್ರ ಬೇಸರ ಉಂಟು ಮಾಡಿದೆ.

ಈಬಾರಿ ಸಚಿವ ಸ್ಥಾನ ನೀಡಲೇಬೇಕುಎಂದು ಪಟ್ಟುಹಿಡಿದಿದ್ದ ಜಿ.ಎಸ್.ಪಾಟೀಲಹಾಗೂ ಅದಕ್ಕೆ ಒತ್ತಾಯಿಸಿ ಶಾಸಕರಬೆಂಬಲಿಗರು ತುಮಕೂರಿನಿಂದಬೆಂಗಳೂರಿನ ವರೆಗೆ ಪಾದಯಾತ್ರೆಮಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದಅವರಿಗೆ ತಮ್ಮ ಹಕ್ಕೊತ್ತಾಯಮಂಡಿಸಿದ್ದರು.ಹೀಗಾಗಿಸಚಿವ ಸ್ಥಾನದ ಬದಲು ವಿಧಾನಸಭೆಸಭಾಧ್ಯಕ್ಷ ಹುದ್ದೆ ನೀಡಿಸಮಾಧಾನಪಡಿಸಲಾಗಿದೆ ಎಂಬ ಮಾತುಗಳುಕಾರ್ಯಕರ್ತರ ವಲಯದಲ್ಲಿಕೇಳಿಬರುತ್ತಿವೆ.

ಡಿಕೆಶಿಆಪ್ತರು:ಸಿಎಂಡಿ.ಕೆ.ಶಿವಕುಮಾರಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಬಣ ಗಣನೆಗೆ ತೆಗೆದುಕೊಂಡರೆ ಶಾಸಕಜಿ.ಎಸ್.ಪಾಟೀಲಡಿ.ಕೆ.ಶಿವಕುಮಾರಬಣದಲ್ಲಿ ಗುರುತಿಸಿಕೊಂಡಿವರು.ಸಚಿವಸ್ಥಾನ ರೇಸ್ ನಲ್ಲಿದ್ದ ಜಿಎಸ್‌ಪಿಗೆಸ್ಪೀಕರ್ ಸ್ಥಾನ ನೀಡಲಾಗಿದೆ.

ಉಸ್ತುವಾರಿಯಾರಿಗೆ?
ಜಿಲ್ಲೆಯಲ್ಲಿಇಬ್ಬರು ಕಾಂಗ್ರೆಸ್ ಶಾಸಕರಿದ್ದು,ಅದರಲ್ಲಿಒಬ್ಬರು ಈಗ (ಜಿ.ಎಸ್.ಪಾಟೀಲ)ಸ್ಪೀಕರ್ಹುದ್ದೆ ಅಲಂಕರಿಸಿದ್ದಾರೆ.ಮತ್ತೊಬ್ಬರುಎಚ್.ಕೆ.ಪಾಟೀಲ.ಇಬ್ಬರೂಸಚಿವರಲ್ಲದ ಕಾರಣ ಬೇರೊಂದುಜಿಲ್ಲೆಯ ಸಚಿವರಿಗೆ ಉಸ್ತುವಾರಿಹೊಣೆ ನೀಡುವ ಸನ್ನಿವೇಶ ಎದುರಾಗಿದೆ.ಪಕ್ಕದಕೊಪ್ಪಳ ಜಿಲ್ಲೆಗೆ ಎರಡು ಮಂತ್ರಿಸ್ಥಾನ ನೀಡಿರುವುದರಿಂದ ಶಿವರಾಜತಂಗಡಗಿಗೆ ಕೊಪ್ಪಳ ಜಿಲ್ಲೆಯಉಸ್ತುವಾರಿ ನೀಡಿ,ಬಸವರಾಜರಾಯರಡ್ಡಿ ಅವರಿಗೆ ಗದಗ ಜಿಲ್ಲೆಯಉಸ್ತುವಾರಿ ಹೆಗಲೇರಲಿದೆ ಎಂಬಮಾತುಗಳು ಕೇಳಿ ಬರುತ್ತಿವೆ.