ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕಾರ್ಯಕ್ರಮವೊದರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರನನ್ನು ಭೇಟಿ ಮಾಡಿರುವುದು. mla
ರೋಣ: ಸಂಪುಟ ಪುನಾರಚನೆ ವೇಳೆ ಶಾಸಕ mla ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಅಲ್ಪಸಂಖ್ಯಾತ ಘಟಕಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ, ರೋಣ ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾವಾಸಾಬ್ ಬೆಟಗೇರಿ ಹೇಳಿದರು.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 45 ವರ್ಷಗಳಿಂದ ಶಾಸಕ ಜಿ.ಎಸ್. ಪಾಟೀಲ ಅವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅಧಿಕಾರಕ್ಕಾಗಿ ಎಂದಿಗೂ ಅವರು ಹೈಕಮಾಂಡ್‌ಗೆ ಬೇಡಿಕೆ ಇಟ್ಟಿಲ್ಲ. ರಾಜ್ಯದಲ್ಲೇ ಸಜ್ಜನ ರಾಜಕಾರಣಿ ಎಂದು ಕರೆಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಹೀಗಾಗಿ, ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ಪ್ರಭಾರಿ ಅಧ್ಯಕ್ಷ ಯೂಸೂಫ್ ಇಟಗಿ, ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಇನಾಯತ ತರಫದಾರ, ಕಾರ್ಯದರ್ಶಿ ಅಬ್ದುಲ್ ರೆಹಮಾನ ಗದಗ, ಸದಸ್ಯರಾದ ಖಲೀಲ ಅಹ್ಮದ್ ರಾಮದುರ್ಗ, ಫಯಾಜ ಅಹ್ಮದ ಕಲಾದಗಿ, ಎ.ಎಸ್. ಖತೀಬ್, ಬಾಷಾಸಾಬ್ ಚೆನ್ನೂರ, ನಬೀಸಾಬ್ ಕೋಲಕಾರ, ಮಲೀಕ ಎಚ್. ಯಲಿಗಾರ, ಮೆಹಬೂಬ್ ಮುಜಾವರ, ಅಬ್ದುಲ್ ಲತೀಫ್ ತಹಶೀಲ್ದಾರ್ ಇದ್ದರು.