ಕ್ಷೌರಿಕ ಸಮಾಜಕ್ಕೆ ಅವಮಾನ ಮಾಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಸಚಿವ ಸಂಪುಟದಿಂದ ( cabinet) ವಜಾಗೊಳಿಸಬೇಕು ಎಂದು ಆಗ್ರಹಿಸಿ ಮುಂಡರಗಿ ಪಟ್ಟಣದಲ್ಲಿ ಬುಧವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಮುಂಡರಗಿ: ನಿಷೇಧಿತ ಪದ ಬಳಸುವ ಮೂಲಕ ಕ್ಷೌರಿಕ ಸಮಾಜಕ್ಕೆ ಅವಮಾನ ಮಾಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಸಚಿವ ಸಂಪುಟದಿಂದ cabinet ವಜಾಗೊಳಿಸಬೇಕು ಎಂದು ತಾಲೂಕು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಬುಧವಾರ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ದೇವು ಹಡಪದ ಮಾತನಾಡಿ, ರಾಜ್ಯದಲ್ಲಿರುವ ಕ್ಷೌರಿಕ ಸಮಾಜದವರು ಎಲ್ಲ ಜನರ ಕೊಳೆಯನ್ನು ತೆಗೆಯುವ ಮೂಲಕ ಸದಾ ಸತ್ಯ, ಶುದ್ಧ ಕಾಯಕ ಮಾಡುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕ್ಷೌರಿಕ ಸಮಾಜದ ನಿಷೇಧಿತ ಪದ ಬಳಕೆ ಮಾಡಿ ಕ್ಷೌರಿಕರನ್ನು ಹಾಗೂ ಕ್ಷೌರಿಕ ವೃತ್ತಿಯನ್ನು ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ ಲಾಡ್ ಅವರು ಕಾರ್ಮಿಕ ಸಚಿವರಾಗಿದ್ದು, ಎಲ್ಲ ಕಾರ್ಮಿಕರನ್ನು ಅವರು ಸಮಾನವಾಗಿ ಕಾಣಬೇಕು. ಕ್ಷೌಕರಿಕ ಸಮಾಜದವರು ಅಸಂಘಟಿತ ಕಾರ್ಮಿಕರಾಗಿದ್ದು, ಅವರ ವೃತ್ತಿಯನ್ನು ಅವಮಾನಿಸುವ ಮೂಲಕ ಸಂತೋಷ ಲಾಡ್ ಅವರು ರಾಜ್ಯದ ಲಕ್ಷಾಂತರ ಕ್ಷೌರಿಕರಿಗೆ ಅವಮಾನ ಮಾಡಿದ್ದಾರೆ. ರಾಜ್ಯದ ಕ್ಷೌರಿಕ ಸಮಾಜಕ್ಕೆ ಅಪಮಾನ ಮಾಡಿರುವ ಲಾಡ್ ಅವರು ತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಕ್ಷೌರಿಕ ಸಮಾಜದ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತೋಷ ಲಾಡ್ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಹಡಪದ, ದೇವರಾಜ ಹಡಪದ, ಕೊಟ್ರೇಶ ಹಡಪದ, ದೇವೇಂದ್ರಪ್ಪ ಹಡಪದ, ಚಂದ್ರಶೇಖರ ನಾಗರಹಳ್ಳಿ, ಶಿವಾನಂದ ಹಡಪದ, ಮುತ್ತು ಹಡಪದ, ನಾಗರಾಜ ಹಡಪದ, ಮಲ್ಲು ಹಡಪದ, ಮಂಜುನಾಥ ಹಡಪದ, ನಾಗರಾಜ ಹಡಪದ ಇತರರು ಇದ್ದರು.