ನರಗುಂದ ಪತ್ರಿವನಮಠ ಜಾತ್ರಾ ಮಹೋತ್ಸವದ ಪ್ರಣವ ಧ್ವಜಾರೋಹಣವನ್ನು ಇಮ್ಮಡಿ ಸಿದ್ಧೇಶ್ವರ ಶ್ರೀಗಳು ಮಂಗಳವಾರ ನೆರವೇರಿಸಿದರು. ಡಾ.ಗುರುಸಿದ್ಧವೀರ ಶಿವಾಚಾರ್ಯರು, ಸಿದ್ಧರಾಮ ಮಹಾಸ್ವಾಮಿಗಳು, ಉದಯ ಮುಧೋಳೆ, ಬಿ.ಎಂ.ಬೀರನೂರ, ಉಮೇಶ ಯಮೋಜಿ. ವಿರೂಪಾಕ್ಷಪ್ಪ, ಇತರರಿದ್ದರು.
- ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮೀಜಿ ಆಶೀರ್ವಚನ
- ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ
- ಶ್ರೀ ಮಠದ ಪರಂಪರೆ ಅತ್ಯಂತ ಶ್ರೇಷ್ಠ
ನರಗುಂದ: ಪಟ್ಟಣದ ಮಹಾತಪೋತಾಣ ಪುಣ್ಯಾರಣ್ಯ ಪತ್ರಿವನಮಠದ (PATRIVANA MATHA) ಶ್ರೀ ಗುರು ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ನವಲಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಭಕ್ತಿಯ ಧ್ಯೋತಕವಾಗಿ ಒಂದು ಬಿಲ್ವ ಪತ್ರಿ ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಒಳಗೊಂಡಿರುತ್ತದೆ. ಆದರೆ, ನರಗುಂದದ ಪುಣ್ಯರಣ್ಯ ಪತ್ರಿವನಮಠವು ಹಲವಾರು ಬಿಲ್ವ ಪತ್ರಿಯ ಮರ, ಗಿಡಗಳನ್ನು ಹೊಂದಿರುವುದರಿಂದ ಭಕ್ತರ ಬಹುದೊಡ್ಡ ಪೀಠವಾಗಿ ಗುರುತಿಸಿಕೊಂಡಿದೆ. 9 ಶಕ್ತಿ ಪೀಠಗಳಿಗಿಂತ ಇಲ್ಲಿನ ಶ್ರೀ ಮಠವು ಅತ್ಯಂತ ಶ್ರೇಷ್ಠ ಹಾಗೂ ಭಗವಂತನ ನೆಮ್ಮದಿಯ ತಾಣವಾಗಿ ಗುರುತಿಸಿಕೊಂಡಿದೆ ಎಂದರು.
ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಸಮಾಜದ ಎಲ್ಲ ಜಾತಿ, ಧರ್ಮ, ಮತ ಪಂಗಡದವರನ್ನು ಒಂದುಗೂಡಿಸುವುದರಲ್ಲಿ ಶ್ರೀ ಮಠದ ಪರಂಪರೆ ಅತ್ಯಂತ ಶ್ರೇಷ್ಠ ಹಾಗೂ ಮುಂಚೂಣಿಯಲ್ಲಿದೆ. ಭಜನೆ, ಕೀರ್ತನೆ, ಜಪ-ತಪ, ಶಿವನಾಮ ಸ್ಮರಣೆಯ ಜತೆಗೆ ಶ್ರೀಮಠಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರನ್ನು ಭಾವೈದಿಂದ ಹರಸಲಾಗುತ್ತದೆ. ಪರಿಣಾಮ ಲಕ್ಷಾಂತರ ಭಕ್ತರು, ಸಾಧು-ಸಂತರು, ಋಷಿಮುನಿಗಳಿಗೆ ಶ್ರೀಮಠವು ನೆಮ್ಮದಿಯ ಆಶ್ರಯ ತಾಣವಾಗಿ ಗುರುತಿಸಿಕೊಂಡಿದೆ ಎಂದರು. ಭಕ್ತರಿಂದ 7 ದಿನಗಳ ಶಿವನಾಮ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಿತ್ತಲಿ ಸಿದ್ಧರಾಮೇಶ್ವರ ಮಠದ ಸಿದ್ಧರಾಮ ಮಹಾಸ್ವಾಮೀಜಿ, ಉದಯ ಮುಧೋಳೆ, ಬಿ.ಎಂ. ಬೀರನೂರ, ಉಮೇಶ ಯಮೋಜಿ. ವಿರೂಪಾಕ್ಷಪ್ಪ ಯಳ್ಳೂರ, ಉಮೇಶ ಯಳ್ಳೂರ, ಭಾರತಿ ಮುತ್ತಿನ, ಮಂಜುಳಾ ಅಸುಂಡಿ, ಜ್ಯೋತಿಬಾ ಗಂಗಪ್ಪನವರ, ಪ್ರಕಾಶ ಪಟ್ಟಣಶೆಟ್ಟಿ. ವಿ.ಎಸ್. ಹಿರೇಮಠ, ಲಕ್ಷ್ಮಣ ತೊಂಡ್ಲೆ, ರಾಜೇಸಾಬ ತಹಸೀಲ್ದಾರ, ಬಸಯ್ಯ ಹಿರೇಮಠ, ಆನಂದ ಗೌಳಿ, ಎಸ್.ವಿ. ಚಕ್ರಸಾಲಿ, ವೆಂಕರಡ್ಡಿ ನೀಲರಡ್ಡಿ, ಹೇಮಣ್ಣ ಮಡಿವಾಳರ, ಜಗ್ಗುರಡ್ಡಿ ಬಾಲರಡ್ಡಿ, ಸಿದ್ರಾಮಪ್ಪ ಪವಾರ, ಈರಣ್ಣ ಕುಲಮಿ, ರಮೇಶ ಬಾರಕೇರ, ಶಿವಯೋಗಿ ಹಾರೂಗೇರಿಮಠ, ಧರ್ಮಾಜಿ ದುಷಿ, ಬಾಬು ಮಾನೆ ಉಪಸ್ಥಿತರಿದ್ದರು. ಈಶ್ವರಯ್ಯ ಮಠಪತಿ ನಿರ್ವಹಿಸಿದರು.