ಕೋಳಿ ಫಾಮರ್್ನಲ್ಲಿದ್ದ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ಯುವುದನ್ನು ಪೊಲೀಸರು ತಡೆದರು.
ಕಳೆದ 15 ವರ್ಷದ ಹಿಂದೆ 23ನೇ ವಾರ್ಡ್ನ ಉಣಚಗೇರಿ ಗ್ರಾಮದ ಕೂಗಳತೆಯಲ್ಲಿ ನಿರ್ವಿುಸಿದ ಕೋಳಿ ಫಾಮರ್್ನಿಂದ ದುರ್ನಾತ ಹರಡುತ್ತಿದ್ದು, ಸುತ್ತಲಿನ ಬಹುತೇಕ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಶಾಲಾ ಮಕ್ಕಳ ಬಿಸಿಯೂಟಕ್ಕೆ ನೊಣಗಳ ಕಾಟ ಅಧಿಕವಾಗಿತ್ತು. ಕಳೆದ 6-7 ವರ್ಷದಿಂದ ನಿವಾಸಿಗಳು ಹಲವಾರು ಕಷ್ಟಗಳನ್ನು ಅನುಭವಿಸುತ್ತಿದ್ದರು. ಇದರ ಬಗ್ಗೆ ನಿವಾಸಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಫಾಮರ್್ಗೆ ನುಗ್ಗಿದರು ಎಂದು ತಿಳಿದುಬಂದಿದೆ.
ಸುತ್ತಮುತ್ತಲಿನ ನಿವಾಸಿಗಳು ಫಾಮರ್್ಗೆ ನುಗ್ಗಿ ಕೈಗೆ ಸಿಕ್ಕಷ್ಟು ಕೋಳಿ ಹಾಗೂ ಮೊಟ್ಟೆ ಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಪ್ರಕಾಶ ಡಿ. ಮತ್ತು ಪೊಲೀಸರು ನಿವಾಸಿಗಳನ್ನು ತಡೆದರು. ಈ ವೇಳೆ ಕೆಲವರು ಕೋಳಿ ಫಾಮ್ರ್ ನೆಲಸಮಗೊಳಿಸಲು ಮುಂದಾಗಿದ್ದರು ಎನ್ನಲಾಗುತ್ತಿದ್ದು, ಪೊಲೀಸರು ಸಾರ್ವಜನಿಕರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
2023ರಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಆಗಿನ ಜಿಲ್ಲಾಧಿಕಾರಿ ವೈಶಾಲಿ ಎಂ. ಅವರು 3 ದಿನದಲ್ಲಿ ಕೋಳಿ ಫಾಮ್ರ್ ತೆರವು ಮಾಡಿ ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಫಾಮ್ರ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಫಾಮ್ರ್ ತೆರವು ಮಾಡುವಂತೆ ಪುರಸಭೆ ಹಾಗೂ ತಹಸೀಲ್ದಾರ್ಗೆ ನಿವಾಸಿಗಳು ಮನವಿ ಸಲ್ಲಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿ ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದರು ಎಂದು ನಿವಾಸಿಗಳು ದೂರುತ್ತಿದ್ದಾರೆ. ಅಧಿಕಾರಿಗಳಿಂದ ಸೂಕ್ತ ಪರಿಹಾರ ಸಿಗದ ಪರಿಣಾಮ ಫಾಮರ್್ಗೆ ನುಗ್ಗಿದ್ದರು. ಫಾಮರ್್ನಲ್ಲಿದ್ದ ಕೋಳಿ ಮತ್ತು ಮೊಟ್ಟೆಗಳಲ್ಲಿ ಶೇ. 50ರಷ್ಟು ಜನರ ಪಾಲಾಗಿವೆ ಎನ್ನಲಾಗುತ್ತಿದೆ.