ನರಗುಂದ ಪಟ್ಟಣದ ಅಂಗಡಿಯಲ್ಲಿ ಪತ್ತೆಯಾಗಿದ್ದ ಹಸಿರು ಹಾವಿನ (Snake) ಮೊಟ್ಟೆಗಳಿಂದ ಹೊರಬಂದಿರುವ ಮರಿಗಳು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿಯ ಗ್ರಾೃನೈಟ್ ಮಾರಾಟದ ಅಂಗಡಿಯಲ್ಲಿ 12 ಹಾವಿನ ಮೊಟ್ಟೆಗಳು ಪತ್ತೆಯಾಗಿದ್ದವು. 8- 10 ದಿನಗಳ ಹಿಂದೆ ಹಾವು ಮೊಟ್ಟೆ ಹಾಕಿರಬಹುದೆಂದು ಅಂದಾಜಿಸಲಾಗಿತ್ತು.
ಅದರಂತೆ ಸೆರೆಸಿಕ್ಕ 12 ಮೊಟ್ಟೆಗಳ ಪೈಕಿ 11 ಮೊಟ್ಟೆಗಳನ್ನು ಜಮೀನಿನ ಶೆಡ್‌ನಲ್ಲಿ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಮರಳು ಸಂಗ್ರಹಿಸಿ, ಮೊಟ್ಟೆಗಳಿಗೆ ಕೃತಕವಾಗಿ ನಿರಂತರವಾಗಿ ಕಾವು ನೀಡಿದ್ದರ ಪರಿಣಾಮ ಒಂದೂವರೆ ತಿಂಗಳ ಬಳಿಕ ಹಾವಿನ ಮೊಟ್ಟೆಗಳು ಮರಿಗಳಾಗಿ ಜನ್ಮ ತಾಳಿವೆ. ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದೇವೆ ಎಂದು ಸುರೇಬಾನ ತಿಳಿಸಿದ್ದಾರೆ.