ಗದಗ

ಪೋಕ್ಸೋ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ: ಜಿಲ್ಲಾ ನ್ಯಾಯಾಲಯ ಆದೇಶ

ನೊಂದ ಬಾಲಕಿಗೆ 7.50ಲಕ್ಷ ರೂ. ಪರಿಹಾರ

ವಿಜಯವಾಣಿ ಸುದ್ದಿಜಾಲ ಗದಗ

ಬುದ್ದಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಭಿತಾದ ಹಿನ್ನೆಲೆ ಜಿಲ್ಲಾ ನ್ಯಾಯಾಲಯವು ಅಪರಾಧಿ ನಾರಾಯಣಪ್ಪ ಸಿದ್ದಪ್ಪ ಪೂಜಾರ(50) 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಇಲ್ಲಿನ ಬೆಟಗೇರಿ ನಿವಾಸಿ ಆಗಿರುವ ಅಪರಾಧಿ ನಾರಾಯಣಪ್ಪ ಪೂಜಾರ ಆ.2, 2022 ರಂದು ಮೆನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಅಪ್ರಾಪ್ತೆಯನ್ನು ಚಾಕಲೇಟ್​ ಕೊಡಿಸುವುದಾಗಿ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಮತ್ತು 2022ರಲ್ಲಿ ಪಂಚಮಿ ಹಬ್ಬದ ದಿನದಂದು ಮನೆಗೆ ಆಡಲು ಬಂದ ಬುಂದಿಮಾಂದ್ಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಮಹಿಳಾ ಠಾಣೆಯಲ್ಲಿ (FIR​ 05/2023) ಪ್ರಕರಣ ದಾಖಲಾಗಿತ್ತು. ಮಾ.13, 2023 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಸರ್ಕಾರಿ ವಿಶೇಷ ಅಭಿಯೋಜಕ ಅಮರೇಶ ಹಿರೇಮಠ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಶೆ ಗೀತಾ ಶಿಂದೆ ಅವರು ಪೋಕ್ಸೋ ಕಾಯ್ದೆ 2012, ಭಾರತೀಯ ದಂಡ ಸಂಹಿತೆ 376/2/ಐ, 376 ಎಬಿ ಸೆಕ್ಷನ್​ ಅಡಿಯಲ್ಲಿ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ, 50 ಸಾವಿರ ರೂ ದಂಡ ವಿಧಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ 7.50 ಲಕ್ಷ ರೂ ಪರಿಹಾರ ನೀಡಲು ಆದೇಶಿಸಿದ್ದಾರೆ.