ಲಕ್ಷ್ಮೇಶ್ವರ ತಾಲೂಕು ತಾಂಡಾದ ಯುವಕರು ಸೋಮವಾರ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು. ತುಕ್ಕಪ್ಪ ಪೂಜಾರ, ಸಂತೋಷ ರಾಠೋಡ, ಪರಮೇಶ ಲಮಾಣಿ, ಗಿರೀಶ ಲಮಾಣಿ, ಕಿರಣ ಲಮಾಣಿ, ಗಣೇಶ ಲಮಾಣಿ, ಇತರರಿದ್ದರು. 
ಗದಗ

ಎಸ್ಸಿ ಒಳಮೀಸಲಾತಿ ರದ್ದತಿಗೆ ಮನವಿ

ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿಗಳಿಗೆ ನೀಡಿರುವ ಒಳಮೀಸಲಾತಿ ರದ್ದುಪಡಿಸಬೇಕು ಎಂದು ತಾಲೂಕಿನ ತಾಂಡಾದ ಯುವಕರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.
ತಾಂಡಾದ ಯುವಕರಾದ ತುಕ್ಕಪ್ಪ ಪೂಜಾರ ಹಾಗೂ ಸಂತೋಷ ರಾಠೋಡ ಮಾತನಾಡಿ, ಒಳಮೀಸಲಾತಿಯಿಂದ ಸಣ್ಣ ಸಣ್ಣ ಸಮುದಾಯದ ಜನತೆಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಈ ಒಳಮೀಸಲಾತಿ ರದ್ದು ಮಾಡಿ ಜನರಿಗೆ ನ್ಯಾಯ ಒದಗಿಸಬೇಕು, ಬಂಜಾರರು ಸಾಮಾಜಿಕ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ದುಡಿಯಲು ದೂರದ ಗೋವಾ, ಮುಂಬೈ, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಈ ಒಳ ಮೀಸಲಾತಿ ಜಾರಿಗೆ ಮಾಡುವುದರಿಂದ ಬಂಜಾರ, ಭಜಂತ್ರಿ, ಭೋವಿ, ಕೊಂಚಿ, ಕೊರವರು ಸೇರಿದಂತೆ ಹಲವು ಸಣ್ಣ ಸಮಾಜದರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಳಮೀಸಲಾತಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಪರಮೇಶ ಲಮಾಣಿ ಮಾತನಾಡಿ, ಗಣತಿಯಲ್ಲಿ ಸಂಗ್ರಹಿಸಿದ ಪ್ರಾಯೋಗಿಕ ಮಾಹಿತಿ ತಾರತಮ್ಯದಿಂದ ಕೂಡಿದೆ. ಸಚಿವ ಸಂಪುಟದ ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಒಳಮೀಸಲಾತಿ ವಿಷಯವನ್ನು ಸರ್ಕಾರ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.
ಗಿರೀಶ ಲಮಾಣಿ, ಕಿರಣ ಲಮಾಣಿ, ಗಣೇಶ ಲಮಾಣಿ, ಕೃಷ್ಣ ಲಮಾಣಿ, ಉಮೇಶ ಲಮಾಣಿ, ತುಳಚಪ್ಪ ಲಮಾಣಿ, ಸಂತೋಷ ಲಮಾಣಿ, ಚನ್ನಪ್ಪ ಲಮಾಣಿ, ಯಂಕಪ್ಪ ಲಮಾಣಿ, ದೇವೇಂದ್ರಪ್ಪ ಲಮಾಣಿ ಇತರರಿದ್ದರು.