spiritual ಲಕ್ಷ್ಮೇಶ್ವರದ ಪೇಠೆ ಭಾಗದಲ್ಲಿರುವ ಪಾಂಡುರಂಗ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ದಿಂಡಿ ಸೋಹಳಾ ಉತ್ಸವ ನಿಮಿತ್ತ ಪಲ್ಲಕ್ಕಿಯಲ್ಲಿ ಪಾಂಡುರಂಗನ ನಗರ ಪ್ರದಕ್ಷಿಣೆ ನೆರವೇರಿಸಲಾಯಿತು 
ಗದಗ

spiritual ಪಾರಮಾರ್ಥಿಕ ಕಾರ್ಯದಿಂದ ನೆಮ್ಮದಿ, ಉತ್ಸಾಹ

ರವಿ ಎಸ್. ಬಳೂಟಗಿ
ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಆಯೋಜಿಸುವ ಮೂರು ದಿನಗಳ ದಿಂಡಿ ಉತ್ಸವ (spiritual) ಪಟ್ಟಣದ ಪೇಠೆ ರಸ್ತೆಯಲ್ಲಿರುವ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಸೋಮವಾರದಿಂದ ಪ್ರಾರಂಭವಾಗಿದ್ದು, ಪೋತಿ ಸ್ಥಾಪನೆ, ಗುಲಾ ಕೀರ್ತನೆ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ಸೋಮವಾರ ನಸುಕಿನ 5 ಗಂಟೆಗೆ ಕಾಕಡಾರತಿ, 7 ಗಂಟೆಯಿಂದ ಭಾವಸಾರ ಕ್ಷತ್ರಿಯ ಸಮಾಜದವರು ಸೇರಿ ದೇವಸ್ಥಾನದ ಆವರಣದಲ್ಲಿ ಸೇರಿ ಶ್ರೀ ಜ್ಞಾನೇಶ್ವರಿ ಗ್ರಂಥದ ಸಾಮೂಹಿಕ ಪಾರಾಯಣ ಮಾಡಿದರು. ನಂತರ ಪ್ರವಚನ, ನಾಮಜಪ, ಕೀರ್ತನೆ ಇತ್ಯಾದಿಗಳು ಸಂಪ್ರದಾಯದಂತೆ ನಡೆದವು. ಎರಡನೇ ದಿನವಾದ ಮಂಗಳವಾರ ಸಂಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಕೊಪ್ಪಳದ ವಿಠ್ಠಲ ಗುರೂಜಿ ಬಿಳಮಕರ್, ಮನುಷ್ಯನಿಗೆ ವಿದ್ಯೆ ಅವಶ್ಯ. ವಿದ್ಯೆ ಇದ್ದಲ್ಲಿ ಉತ್ತಮ ಜೀವನ ಸಾಗಿಸಬಹುದು. ಜತೆಗೆ ಮನಸಿಗೆ ನೆಮ್ಮದಿ ನೀಡುವ ಜೀವನದ ಉತ್ಸಾಹ ಹೆಚ್ಚಿಸುವ ಪಾರಮಾರ್ಥಿಕ ಜೀವನಕ್ಕೂ ಸಮಯ ಮೀಸಲಿಡಬೇಕು. ಮಕ್ಕಳನ್ನು ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಸುವುದರ ಜತೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ಮನದಲ್ಲಿ ಬಿತ್ತುವ ಕಾರ್ಯವಾಗಬೇಕಿದೆ. ಕೀರ್ತನೆ ಭಜನೆಗಳನ್ನು ಆಲಿಸುವುದರಿಂದ ಮನಸಿನ ದುಃಖ ಕಳೆದು ನೆಮ್ಮದಿಯು ಪ್ರಾಪ್ತವಾಗುತ್ತದೆ. ಬದುಕಿನ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ತೊಡಗಿಸಿಕೊಳ್ಳುವದು ಅಗತ್ಯವಾಗಿದೆ ಎಂದು ಹೇಳಿದರು.