ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಶ್ರೀದ್ಯಾಮವ್ವ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಅದ್ದೂರಿ ಪಲ್ಲಕ್ಕಿ ಉತ್ಸವ, ಪೂರ್ಣಕುಂಭ ಮೆರವಣಿಗೆ ಜತೆಗೆ ನೂರಾರು ಜನರು ಭಕ್ತಿಯ ಭಂಡಾರದಲ್ಲಿ ಮಿಂದೆದ್ದರು. 
ಗದಗ

COOKS: ಈ ಊರಿನ ಯಾವ ಮನೆಯಲ್ಲೂ ಅಡುಗೆ ಮಾಡಲ್ಲ!

ಪ್ರಮುಖ ಮುಖ್ಯಾಂಶಗಳು

  • ಬೆನಕನಕೊಪ್ಪ ಗ್ರಾಮದ ಶಕ್ತಿ ದೇವತೆ
  • ಯರಾದ ಶ್ರೀ ದ್ಯಾಮವ್ವ, ಶ್ರೀೀದುರ್ಗಾ ದೇವಿಯರ ಜಾತ್ರೆ
  • 18 ವರ್ಷಗಳ ನಂತರ ಗ್ರಾಮದಲ್ಲಿ ಮನೆ ಮಾಡಿದ ಸಂಭ್ರಮ
  • ಗ್ರಾಮದ ಯಾರೊಬ್ಬರ ಮನೆಯಲ್ಲೂ ಅಡುಗೆ ಮಾಡುವಂತಿಲ್ಲ
  • ಗ್ರಾಮದಲ್ಲಿ ಯಾರೊಬ್ಬರೂ ಪಾದರಕ್ಷೆ ಧರಿಸುವಂತಿಲ್ಲ
  • ನಿಯಮ ಮೀರಿದರೆ 500 ರೂ. ದಂಡ
ನರಗುಂದ: ಅದು ಸಂಪ್ರದಾಯವೇ (COOKS) ತನ್ನ ಜೀವಾಳ ಎನ್ನುವಂತೆ ಬದುಕು ಸಾಗಿಸುತ್ತಿರುವ ಸಾಂಸ್ಕೃತಿಕ ಗ್ರಾಮ.. ಈ ಊರಿನ ಶಕ್ತಿದೇವತೆಯರೇ ಗ್ರಾಮದ ರಕ್ಷಕರು. ಹೀಗಾಗಿ ಈ ದೇವರಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಶ್ರದ್ಧೆ-ಭಕ್ತಿಯಿಂದಲೇ ಮಾಡಲಾಗುತ್ತದೆ.. ಈ ಗ್ರಾಮದಲ್ಲಿ ಬರೋಬ್ಬರಿ 18 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು ಹತ್ತಾರು ವಿಶೇಷತೆಗಳನ್ನು ಒಳಗೊಂಡಿದೆ. ಇಡೀ ನಾಡಿನ ಗಮನ ಸೆಳೆದಿದೆ.
ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ 18 ವರ್ಷದ ನಂತರ ಗ್ರಾಮದ ಶಕ್ತಿ ದೇವತೆಯ ಜಾತ್ರೆ ನಡೆಯುತ್ತಿದ್ದು, ಹಲವಾರು ಕಟ್ಟುನಿಟ್ಟಿನ ಆಚರಣೆಯೊಂದಿಗೆ ಗ್ರಾಮದ ಜನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಜಾತ್ರೆಯ ಅಂಗವಾಗಿ ಐದು ದಿನಗಳ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಗ್ರಾಮದ ಯಾರೊಬ್ಬರ ಮನೆಗಳಲ್ಲಿಯೂ ಅಡುಗೆ ಮಾಡುವಂತಿಲ್ಲ. ಊರಿನ ಯಾರೊಬ್ಬರೂ ಪಾದರಕ್ಷೆ ಧರಿಸುವಂತಿಲ್ಲ. ಆಕಸ್ಮಾತ್ ನಿಯಮ ಮಿರಿದರೆ ಅಂತವರಿಗೆ 500 ರೂಪಾಯಿ ದಂಡ ಹಾಕಲಾಗುತ್ತದೆ. 50 ಕ್ವಿಂಟಾಲ್ ಭಂಡಾರದಲ್ಲಿ ಗ್ರಾಮದ ಯುವಕರು, ಮಕ್ಕಳು, ಮಹಿಳೆಯರು ಮಂಗಳವಾರ ಮಿಂದೇಳುವ ಮೂಲಕ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಗ್ರಾಮದ ಶಕ್ತಿ ದೇವತೆಯರಾದ ಶ್ರೀ ದ್ಯಾಮವ್ವ ಹಾಗೂ ಶ್ರೀೀದುರ್ಗಾ ದೇವಿಯರ ಜಾತ್ರೆ ಅಂಗವಾಗಿ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ವಿವಿಧ ವಾದ್ಯಮೇಳ, ಮುತ್ತೈದೆಯರ ಪೂರ್ಣಕುಂಭದೊಂದಿಗೆ ಅದ್ದೂರಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯೂದ್ಧಕ್ಕೂ ಭಕ್ತಿಯ ಭಂಡಾರ ಎರಚಲಾಯಿತು. ಗ್ರಾಮದ ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ಡಿಜೆ ಸಂಗೀತಕ್ಕೆ ಡಾನ್ಸ್ ಮಾಡುತ್ತಿರುವ ದೃಶ್ಯಗಳು ನೋಡುಗರ ಕಣ್ಮನ ಸೆಳೆದವು.
ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಹೆಣ್ಣು ಮಕ್ಕಳು ತವರು ಮನೆಗೆ ಬಂದಿದ್ದು, ಗ್ರಾಮ ದೇವತೆಯರಿಗೆ ವಿಶೇಷ ಪೂಜೆ ಸಲ್ಲಿಸಿ ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ಜಾತ್ರೆ ನಿಮಿತ್ತ ಗ್ರಾಮದ ಯಾರ ಮನೆಯಲ್ಲೂ ಅಡುಗೆ ಮಾಡದ ಕಾರಣ ಭಕ್ತಿರಿಗಾಗಿ ನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಮಡಿ-ಉಡಿಯ ಸಲುವಾಗಿ ಜಾತ್ರಾ ಕಮಿಟಿ ಕಟ್ಟು ನಿಟ್ಟಿನ ನಿಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.