shot put ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಗ್ಲಿ ಗ್ರಾಮದ ಮಂಜುನಾಥ ಹಳೇರಿತ್ತಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಲಕ್ಷ್ಮೇಶ್ವರ: ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಪ್ರೌಢ ಶಾಲೆಯ ವಿದ್ಯಾರ್ಥಿ ಮಂಜುನಾಥ ಹಳೇರಿತ್ತಿ ಸರಪಳಿ ಗುಂಡು ( shot put) ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉತ್ತರಪ್ರದೇಶದ ಲಕ್ನೋದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಯ ಸಾಧನೆಗೆ ತರಬೇತುದಾರ, ಶಾಲೆಯ ದೈಹಿಕ ಶಿಕ್ಷಕ ಕೆ.ಆರ್. ಲಮಾಣಿ ಹಾಗೂ ಸಂಸ್ಥೆಯ ಚೇರ್ಮನ್ ಎಸ್.ಪಿ. ಬಳಿಗಾರ ಹರ್ಷ ವ್ಯಕ್ತಪಡಿಸಿದ್ದಾರೆ. ಎಸ್.ಪಿ. ಬಳಿಗಾರ, ಎಫ್.ಡಿ. ಹುನಗುಂದ, ಸೋಮಣ್ಣ ಡಾಣಗಲ್ ಇತರರಿದ್ದರು.