ತೆರಿಗೆ  
ಗದಗ

TAX ತೆರಿಗೆ ಸಂಗ್ರಹದಲ್ಲಿ ಮುಂಡರಗಿ ಪುರಸಭೆ ಪ್ರಥಮ

ಮುಂಡರಗಿ: ಪಟ್ಟಣದ ಪುರಸಭೆಯು ತೆರಿಗೆ ಸಂಗ್ರಹ ಮತ್ತು ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದೇ ರೀತಿ ಮುಂದೆಯೂ ಪುರಸಭೆ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಉತ್ತಮ ರೀತಿ ಕೆಲಸ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿವಹಿಸಬೇಕು ಎಂದು ಪುರಸಭೆ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆಯ ನೂತನ ಎರಡು ಟ್ರ್ಯಾಕ್ಟರ್, ಒಂದು ಮಿನಿ ಟಿಪ್ಪರ್ ಸೇವೆ ಸಮರ್ಪಿಸಿ ಹಾಗೂ ಹೈಟೆಕ ಶೌಚಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಡರಗಿ ಪುರಸಭೆಯು ಸಾರ್ವಜನಿಕರ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿಕೊಡುವ ಮೂಲಕ ಎಲ್ಲ ರೀತಿಯಿಂದಲೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅನೇಕ ವರ್ಷಗಳಿಂದ ಪುರಸಭೆಯಲ್ಲಿ ಕೇವಲ ಒಂದೇ ಟ್ಯಾಕ್ಟ್ರರ್‌ನಲ್ಲಿ ಕೆಲಸ ಮಾಡುತ್ತಿತ್ತು. ಪಟ್ಟಣದಲ್ಲಿರುವ ಕಸ ಸಾಗಾಣಿಕೆ ಮಾಡುವುದಕ್ಕೆ ಬಾಡಿಗೆ ಟ್ರಾೃಕ್ಟರ್ ಪಡೆಯಲಾಗಿತ್ತು. ಇದರಿಂದ ತೊಂದರೆಯಾಗುತ್ತಿತ್ತು. ಸಮಸ್ಯೆ ನಿವಾರಣೆಗೆ ಪುರಸಭೆಯಿಂದ 2 ಟ್ರಾೃಕ್ಟರ್, 1 ಮಿನಿ ಟಿಪ್ಪರ್ ಖರೀದಿಸಲಾಗಿದೆ. ಪೌರಕಾರ್ಮಿಕರು ಸಮರ್ಪಕವಾಗಿ ವಾಹನ ಬಳಕೆ ಮಾಡಿಕೊಂಡು ಪಟ್ಟಣದ ಸ್ವಚ್ಛತೆಗೆ ಮಹತ್ವ ನೀಡಬೇಕು. ಇಲಾಖೆಗೆ ಬರುವಂತಹ ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್., ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ರಮೇಶ ಗೊಂದಕರ, ಜೆ.ಇ. ಸಿಂಧೂ, ಲಿಂಗರಾಜಗೌಡ ಪಾಟೀಲ, ಬಸವರಾಜ ದೇಸಾಯಿ, ನಾಗರಾಜ ಹೊಂಬಳಗಟ್ಟಿ, ಉಮಾ ಯಟ್ಟಿ, ಅಶೋಕ ಪೂಜಾರ, ಶಾರದಾ, ಎಂ.ಎಸ್. ಮ್ಯಾಗೇರಿ, ದಾನೇಶ್ವರಿ ಹಿರೇಮಠ, ರವಿ ಕುಂಬಾರ, ಇತರರಿದ್ದರು.