ಮುಂಡರಗಿ ತಾಲೂಕಿನ ಕಲಕೇರಿ ದೇಶಗತಿ ಮನೆತನದ ರವಿರಾಜ ದೇಸಾಯಿ ಅವರ ಮನೆಗೆ ಪತ್ರಗಾರ ಇಲಾಖೆ ಮತ್ತು ಗ್ಯಾಸೆಟಿಯರ್ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ಮತ್ತು ಜಂಟಿ ನಿರ್ದೇಶಕಿ
ಮುಂಡರಗಿ: ಬೆಂಗಳೂರಿನ ಪತ್ರಗಾರ ಇಲಾಖೆ ಮತ್ತು ಗ್ಯಾಸೆಟಿಯರ್ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ಮತ್ತು ಜಂಟಿ ನಿರ್ದೇಶಕಿ ಮಂಜುಳಾ ಯಲಿಗಾರ ಅವರು ತಾಲೂಕಿನ ಕಲಕೇರಿ ಗ್ರಾಮದ ಇತಿಹಾಸ ಪ್ರಸಿದ್ಧ ದೇಸಾಯಿ ಮನತೆನಕ್ಕೆ ಶನಿವಾರ ಭೇಟಿ ನೀಡಿ ಮನೆತನದ ಚಾರಿತ್ರಿಕ ದಾಖಲೆಗಳನ್ನು ಪರಿವೀಕ್ಷಣೆ ಮಾಡಿದರು.
ದೇಸಾಯಿ ಮನೆತನದ ರವಿರಾಜ ದೇಸಾಯಿ ಮತ್ತಿತರು ಉಪಸ್ಥಿತರಿದ್ದು, ದಾಖಲೆಗಳನ್ನು ತೋರಿಸಿ ಮಾಹಿತಿ ನೀಡಿದರು. 2025ರಲ್ಲಿ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಸಹಯೋಗದಲ್ಲಿ ಆಯೋಜನೆಗೊಂಡು ಯಶಸ್ವಿಯಾಗಿ ಸಂಪನ್ನಗೊಂಡಿರುವ ಕಣ್ಮರೆಯಾದ ದೇಶಗತಿ ಕಲಕೇರಿ ಸಂಸ್ಥಾನದ ಗದಗ ಮತ್ತು ಕೊಪ್ಪಳದ ಐತಿಹಾಸಿಕ ನಿರೂಪಣೆಗಳು ಎಂಬ ಎರಡು ದಿನದ ರಾಜ್ಯ ವಿಚಾರ ಸಂಕೀರಣದಲ್ಲಿ ಮಂಡನೆಯಾದ ಲೇಖನಗಳ ಕುರಿತು ನಿರ್ದೇಶಕರ ಗಮನ ಸೆಳೆಯಲಾಯಿತು.
ನಿರ್ದೇಶಕ ಡಾ. ಗವಿಸಿದ್ದಯ್ಯ ಅವರು ಆದಷ್ಟು ಬೇಗನೆ ಸಂಪಾದಕ ಮಂಡಳಿ ರಚಿಸಿ ಸದರಿ ವಿಚಾರ ಸಂಕಿರಣದಲ್ಲಿ ಮಂಡನೆಯಾಗಿರುವ ಲೇಖನಗಳನನ್ನು ಆದಷ್ಟು ಬೇಗ ಸಂಗ್ರಹಿಸಿ ಕರಡು ಪ್ರತಿಯೊಂದಿಗೆ ಕೃತಿ ಪ್ರಕಟಣೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.