ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ (Mukti mandir) ಧರ್ಮಕ್ಷೇತ್ರದಿಂದ ಲಕ್ಷ್ಮೇಶ್ವರವರೆಗಿನ ಸಿ.ಸಿ.ರಸ್ತೆ ಕಾಮಗಾರಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಾಗೂ ಮುಕ್ತಿಮಂದಿರ ಶ್ರೀಗಳ ಸಮ್ಮುಖದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು. 
ಗದಗ

mukti mandir: ಮುಕ್ತಿಮಂದಿರ ರಸ್ತೆಗೆ ಕೊನೆಗೂ ಸುಧಾರಣೆ ಭಾಗ್ಯ

ಲಕ್ಷ್ಮೇಶ್ವರ: ತಾಲೂಕಿನ ಮುಕ್ತಿಮಂದಿರ (mukti mandir) ಧರ್ಮಕ್ಷೇತ್ರದಿಂದ ಲಕ್ಷ್ಮೇಶ್ವರ ಸಿ.ಸಿ.ರಸ್ತೆ ಕಾಮಗಾರಿಗೆ ರಂಭಾಪುರಿ ಜ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಹಾಗೂ ಮುಕ್ತಿಮಂದಿರ ಶ್ರೀಗಳ ಸಮ್ಮುಖದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ‘ಬಹು ದಿನಗಳಿಂದ ಈ ರಸ್ತೆ ಸುಧಾರಣೆಗಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಕಾಮಗಾರಿಯ ಬಗ್ಗೆ ಶಾಸಕ ಡಾ.ಚಂದ್ರು ಲಮಾಣಿಯವರು ವಿಶೇಷ ಕಾಳಜಿ ವಹಿಸಿ ಕೊನೆಗೂ ಈ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿರುವದು ಶ್ಲಾಘನೀಯ. ಇದು ಅವರ ಕ್ರೀಯಾಶೀಲ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ, ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗಗಳ ಸ್ಥಾಪನೆ ಕಾರ್ಯ ಭರದಿಂದ ಸಾಗಿದ್ದು, ಸಾಕಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ, ಈ ಹಿನ್ನಲೆಯಲ್ಲಿ ರಸ್ತೆ ಸ್ಮಧಾರಣೆ ಅತಿ ಅವಶ್ಯವಾಗಿದ್ದು, ಶಾಸಕರು ಈ ಕಾರ್ಯವನ್ನು ಈಡೇರಿಸಿದ್ದಾರೆ’ ಎಂದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದ ಲಿಂ. ಜ.ವೀರಗಂಗಾಧರ ಮಹಾಸ್ವಾಮಿಗಳ ತಪೋಭೂಮಿ ನಮ್ಮ ಕ್ಷೇತ್ರದಲ್ಲಿರುವುದು ನಮ್ಮ ಭಾಗ್ಯವಾಗಿದೆ. ತ್ರಿಕೋಟಿ ಲಿಂಗ ಸ್ಥಾಪನೆಯಿಂದ ಮುಕ್ತಿಮಂದಿರ ಮುಂದಿನ ದಿನಗಳಲ್ಲಿ ಪವಿತ್ರ ಯಾತ್ರಾ ಸ್ಥಳವಾಗಿ ಮಾರ್ಪಡಲಿದ್ದು ವಿಶ್ವ ಪ್ರಸಿದ್ಧಿ ಪಡೆಯಲಿದೆ. ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರಿಗೆ ಸೂಚಿಸಲಾಗಿದ್ದು, ಮುಕ್ತಿಮಂದಿರ-ಗುಲಗಂಜಿಕೊಪ್ಪ ರಸ್ತೆಯ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ಶ್ರೀವಿಮಲರೇಣುಕ ಶಿವಾಚಾರ್ಯ ಸ್ವಾಮೀಜಿ, ಸುನೀಲ ಮಹಾಂತಶೆಟ್ಟರ, ರುದ್ರು ಘಂಟಾವಮಠ, ವಿಜಯ ಬೂದಿಹಾಳ, ಇಂಜಿನಿಯರ್ ಅನಿಲ ಜಾಧವ, ಮಲ್ಲಿಕಾರ್ಜುನ ಪಾಟೀಲ ಇತರರಿದ್ದರು.