motherಲಕ್ಷ್ಮೇಶ್ವರದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಅರಳಿ ಅವರನ್ನು ಸನ್ಮಾನಿಸಲಾಯಿತು.  
ಗದಗ

Mother ಸ್ತ್ರೀಶೋಷಣೆ ಮೆಟ್ಟಿನಿಂತ ಮಾತೆ ಶಾರದಾದೇವಿ

ಲಕ್ಷ್ಮೇಶ್ವರ: ಶ್ರೀಮಾತೆ ಶಾರದಾದೇವಿ ಎಂದ ಕೂಡಲೆ ಕಣ್ಮುಂದೆ ಹಾಯುವುದು ಪರಮಪವಿತ್ರ ಜೀವನ. ಆಧ್ಯಾತ್ಮಿಕ ಶಕ್ತಿ, ಸರಳ (mother) ಬದುಕಿನ ಮೂಲಕ ಅವರು ಗುರುಮಾತೆಯ ಸ್ಥಾನ ಪಡೆದವರು ಎಂದು ಕನ್ನಡ ಉಪನ್ಯಾಸಕಿ ರೇಷ್ಮಾ ರೇಷ್ಮಾ ಮೇಲಗಿರಿ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀಮಾತೆ ಶಾರದಾದೇವಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಸುತ್ತಿದ್ದ . ಕಾಲದಲ್ಲಿ ಶಾರದಾದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು. ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿ ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾ ಕಾರ್ಯಗಳಿಗೆ ಮೀಸಲಾಗಿರುತ್ತಿತ್ತು ಎಂದರು.
ನಿವೃತ್ತ ಶಿಕ್ಷಕಿ ಸಾವಿತ್ರಿಬಾಯಿ ನೇಕಾರ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಪಾಟೀಲ, ಅನ್ನಪೂರ್ಣಾ ಓದುನವರ, ಗಾಯತ್ರಿ ಓದುನವರ ಆಗಮಿಸಿದ್ದರು. ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಜಿ. ಅರಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆ ಅಧ್ಯಕ್ಷೆ ಸಾಹಿತಿ ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ್, ಲತಾ ತಟ್ಟಿ, ಶಾಂತಾ ಅಬ್ಬಿಗೇರಿ, ಕಾಂಚನಮಾಲಾ ಹಸರೆಡ್ಡಿ, ನೀಲಕ್ಕ ಬೂದಿಹಾಳ, ಲಲಿತಾ ಲಮಾಣಿ, ಅರುಂಧತಿ ಬಿಂಕದಕಟ್ಟಿ, ಜಯಶ್ರೀ ಮತ್ತಿಕಟ್ಟಿ, ವೀಣಾ ಕುಂಬಿ, ಅಶ್ವಿನಿ ಅಂಕಲಕೋಟಿ, ದೇವಕ್ಕ ಕೊಡ್ಲಿವಾಡ, ರತ್ನಾ ಕರ್ಕಿ, ಶಾರದಾ ಮಹಾಂತಶೆಟ್ಟರ ಇತರರಿದ್ದರು. ಶೈಲಾ ಬಿಂಕದಕಟ್ಟಿ, ಶೋಭಾ ಗಾಂಜಿ, ಮಹಾನಂದಾ ಕೊಣ್ಣೂರ ನಿರೂಪಿಸಿದರು.