ಕಪ್ಪತ್ತಗುಡ-ಕಡಕೋಳ ಗ್ರಾಮ ಬಳಿ ಮುಂಗಾರು Monsoon ಪೂರ್ವ ಬಾರಿ ಮಳೆ ಸುರಿಯಿತು. 
ಗದಗ

Monsoon ಮುಂಗಾರು ಚುರುಕು ರೈತರಲ್ಲಿ ಹುರುಪು

ಮಂಜುನಾಥ ಕೆಂಪಸಣ್ಣವರ
ಶಿರಹಟ್ಟಿ: ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಈ ಭಾಗದಲ್ಲಿ ಸರಾಸರಿ 2.5 ಸೆಂ.ಮೀ.ನಿಂದ 4 ಸೆಂ.ಮೀ.ರವರೆಗೆ ಮಳೆ ದಾಖಲಾಗುವ ಸಾಧ್ಯತೆಯಿದ್ದು, ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಮುಂಗಾರು Monsoon ಮಳೆ ಮತ್ತಷ್ಟು ಚುರುಕಾಗುವ ಮುನ್ಸೂಚನೆ ಸಿಕ್ಕಿದೆ. ಮುಂಗಾರು ಪೂರ್ವ ಮಳೆಯ ಅಬ್ಬರ ರೈತರಲ್ಲಿ ಹರ್ಷ ತಂದಿದೆ.
ಮಾರುಕಟ್ಟೆ ಜಲಾವೃತ: ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಪ್ರಮುಖ ಮಾರುಕಟ್ಟೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಹಠಾತ್ ಮಳೆಯಿಂದಾಗಿ ರಸ್ತೆ ಬದಿಯ ತರಕಾರಿ, ಹಣ್ಣು ಹಾಗೂ ದಿನಸಿ ವ್ಯಾಪಾರಸ್ಥರು ತಮ್ಮ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಾರುಕಟ್ಟೆ ಆವರಣದಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಗ್ರಾಹಕರು ಬಾರದೇ ವ್ಯಾಪಾರ ವಹಿವಾಟು ಸಂಪೂರ್ಣ ಕುಂಠಿತಗೊಂಡಿತು. ಮಳೆ ನೀರಿನಿಂದಾಗಿ ಸಾವಿರಾರು ರೂಪಾಯಿ ಮೌಲ್ಯದ ತರಕಾರಿ ಹಾನಿಗೀಡಾದವು.
ಗ್ರಾಮೀಣ ರಸ್ತೆಗಳ ದುಸ್ಥಿತಿ: ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಈಗಾಗಲೇ ಸಂಪೂರ್ಣ ಕೆಟ್ಟು ಹೋಗಿದ್ದು, ಇಂದಿನ ಮಳೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ರಸ್ತೆಯೋ, ಕೆರೆಯೋ ತಿಳಿಯದಂತೆ ರಸ್ತೆಗಳ ಮಧ್ಯೆ ದೊಡ್ಡ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಬೈಕ್ ಸವಾರರು ಹಾಗೂ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಯಿತು.
ಮಳೆಗಾಲ ಆರಂಭವಾಗುತ್ತಿದ್ದರೂ ಪಟ್ಟಣದ ಪ್ರಮುಖ ಚರಂಡಿಗಳ ಹೂಳು ತೆಗೆಯದ ಪುರಸಭೆ/ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಸಮಾಧಾನ ವ್ಯಕ್ತಪಡಿಸಿದರು.