Union Minister Prahalad Joshi 
ಗದಗ

ಕಬ್ಬು ಬೆಳಗಾರರ ಸಮಸ್ಯೆ ಬಗೆಹರಿಸುವ ಕುರಿತು ಸೋಮವಾರ ಸಮಿತಿ ಸದಸ್ಯರೊಂದಿಗೆ ಸಭೆ: ಪ್ರಹ್ಲಾದ ಜೋಶಿ

ಗದಗ: ಕಬ್ಬು ಮತ್ತು ಕಬ್ಬು ಬೆಳಗಾರರ ಸಮಸ್ಯೆ ಪರಿಹರಿಸುವುದಕ್ಕೆ ಮತ್ತು ಭವಿಷ್ಯದಲ್ಲಿ ಕಬ್ಬಿಬಿಂದ ರೈತರಿಗೆ ಅನುಕೂಲ ಆಗುವಂತೆ ರೈತರೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲು ಉನ್ನತಮಟ್ಟದ ಸಮಿತಿ ರಚಿಸಲಾಗಿದ್ದು, ಸೋಮವಾರ ಸಭೆ ಜರುಗಲಿಗೆ ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜ್ಯೋಶಿ ಹೇಳಿದರು.

ಕಬ್ಬು ಸಮಸ್ಯೆ ಬಗೆಹರಿಸಲು ಕಬ್ಬು ಕಟಾವು ಸಂದರ್ಭದಲ್ಲಿ ಕೇಂದ್ರದಿಂದ ಅಧಿಕಾರಿಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗುವುದು ಎಂದ ಅವರು, ಕಾಂಗ್ರೆಸ್​ ಅಧಿಕಾರದಲ್ಲಿ ಇದ್ದಾಗ ದೇಶದಲ್ಲಿ 38 ಕೋಟಿ ಲೀಟರ್​ ಎಥೆನಾಲ್​ ಉತ್ಪಾದನೆ ಆಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ 1200 ಕೋಟಿ ಲೀಟರ್​ ಎಥೆನಾಲ್​ ಉತ್ಪಾದನೆ ಆಗುತ್ತಿದೆ. ಎಸ್​ಎಪಿ ಅನುಸಾರ ರಾಜ್ಯ ಸರ್ಕಾರ ರೈತಿಗೆ ಬೆಲೆ ನೀಡಬೇಕು. ಕಾನೂನಿನಲ್ಲಿ ಅವಕಾಶ ಇದೆ. ಇತರೆ ರಾಜ್ಯಗಳಲ್ಲಿ ಎಸ್​ಎಪಿ ದರ ಅನ್ವಯವೇ ಬೆಲೆ ನೀಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಎಸ್​ಎಪಿ ಮಾನದಂಡ ಅನ್ವಯ ನಿಡುತ್ತಿಲ್ಲ ಎಂದರು.

ಸಮಿತಿ ಜತೆ ಚರ್ಚೆ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗುವುದು. ರೈತರ ಬೇಡಿಕೆಗಳನ್ನು ಈಡೇರಿಸಲು ಕಮಿಟಿ ಸಲಹೆ ಸೂಚನೆ ನೀಡಲಿದೆ. ಅದರ ಮೇಲೆ ನಿರ್ಣಯ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಸಮರ್ಪಕ ಕೆಲಸ ಮಾಡುತ್ತಿಲ್ಲ. ತೂಕ, ಅಳತೆ ವಿಷಯದಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೊಮ್ಮಾಯಿ, ರವಿ ದಂಡಿನ, ರಾಜು ಕುರಡಗಿ, ಎಂ. ಎಂ. ಹಿರೇಮಠ, ಉಷಾ ದಾಸರ ಹಲವರು ಇದ್ದರು