ಮುಂಡರಗಿ ಪಟ್ಟಣದಲ್ಲಿ ನಿರ್ಮಾಣಗೊಂಡ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಭವನದ ಪ್ರವೇಶ ಸಮಾರಂಭದಲ್ಲಿ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿದರು. ಎಸ್.ಎಸ್. ಪಾಟೀಲ, ವಿವೇಕಾನಂದಗೌಡ ಪಾಟೀಲ, ಎ.ಬಿ. ಹಿರೇಮಠ, ಎಂ.ಜಿ. ಗಚ್ಚಣ್ಣವರ ಇತರರಿದ್ದರು. 
ಗದಗ

SAHITYA: ಸಾಹಿತ್ಯ ಕಾರ್ಯಗಳು ನಿರಂತರವಾಗಿ ನಡೆಯಲಿ

ಸೋಮನಾಥ ರೆಡ್ಡಿ
ಮುಂಡರಗಿ: ಕನ್ನಡ ಭಾಷೆ ಉಳಿವಿಗೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕು. ಏನೇ ತೊಂದರೆ ಬಂದರೂ ಅವುಗಳಿಗೆ ಭಯಬೀಳದೆ ಮುನ್ನಡೆದು ನಿರ್ದಿಷ್ಟ ಗುರಿ ತಲುಪಬೇಕು. ಈ ನೂತನ ಕನ್ನಡ ಸಾಹಿತ್ಯ (SAHITYA) ಭವನದಲ್ಲಿ ಸಾಹಿತ್ಯ ಪುಸ್ತಕಗಳು ಸಾಹಿತ್ಯಸಕ್ತರಿಗೆ ಸಿಗುವಂತೆ ಆಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದಲ್ಲಿ ಗುರುವಾರ ಜರುಗಿದ ನೂತನ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದ ಪ್ರವೇಶ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಾನವ ಹೋದರೂ ಸಾಹಿತ್ಯ ಸದಾ ಉಳಿಯುತ್ತದೆ. ಜ್ಞಾನ ಸಂಪತ್ತು ಸದಾ ನಮ್ಮಲ್ಲಿರುತ್ತದೆ. ಕಸಾಪನಿಂದ ಸಾಹಿತ್ಯ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸರ್ಕಾರದ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗುವುದಿಲ್ಲ. ಸರ್ಕಾರದ ದುಡ್ಡು ಅಪವ್ಯಯವಾಗುತ್ತಿದೆ. ಹೀಗಾಗಿ ಸರ್ಕಾರ ನೇರವಾಗಿ ಸಂಬಂಧಿಸಿದ ಆಯಾ ಸಂಸ್ಥೆಗೆ ಅನುದಾನವನ್ನು ಹಂಚಿಕೆ ಮಾಡಬೇಕು. ನೂತನ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಮಾದರಿಯಾಗಬೇಕು. ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ.ಅನ್ನದಾನೀಶ್ವರ ಶ್ರೀಗಳು ಕಟ್ಟಡಕ್ಕೆ ಭೂದಾನ ಮಾಡಿ, ಹಣಕಾಸಿನ ನೆರವು ನೀಡಿ ಆಶೀರ್ವದಿಸಿ ಪ್ರೋತ್ಸಾಹಿಸಿದ್ದರಿಂದ ಮತ್ತು ದಾನಿಗಳ ಸಹಕಾರದಿಂದ ಸಾಹಿತ್ಯ ಭವನ ನಿರ್ಮಾಣವಾಗಿದೆ. ಸಾಹಿತ್ಯ ಭವನ ಜನರ ಭವನವಾಗಬೇಕು. ತಾಲೂಕು ಸಾಹಿತ್ಯ ಸಮ್ಮೇಳನ ಶೀಘ್ರಗತಿ ನಡೆಯುವಂತಾಗಲಿ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಬಿ. ಹಿರೇಮಠ, ತಾಲೂಕಾಧ್ಯಕ್ಷ ಪ್ರೊ.ಎಂ.ಜಿ. ಗಚ್ಚಣ್ಣವರ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಶಂಕರ ಕುಕನೂರ, ಕಾಶೀನಾಥ ಬಿಳಿಮಗ್ಗದ, ಸಿ.ಕೆ. ಗಣಪ್ಪನವರ, ವೀಣಾ ಪಾಟೀಲ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಸುರೇಶ ಬಾವಿಹಳ್ಳಿ, ಮಂಜುಳಾ ಇಟಗಿ, ಅನ್ನದಾನಿ ಹಿರೇಮಠ, ನವೀಣ ಅಳವಂಡಿ, ಎಂ.ಐ.ಮುಲ್ಲಾ, ಎನ್.ಎನ್. ಕಲಕೇರಿ ಇತರರು ಇದ್ದರು.
ಸಾಹಿತಿ ಪ್ರೊ. ಆರ್.ಎಲ್. ಪೋಲಿಸ ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿದರು. ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಮಂಜುನಾಥ ಮುಧೋಳ ನಿರೂಪಿಸಿದರು.