ಲಕ್ಷ್ಮೇಶ್ವರದಲ್ಲಿ ಹನುಮ ಜಯಂತಿ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಮೂಹಿಕ ಗದಾಪೂಜೆ gadapuja ನೆರವೇರಿಸಲಾಯಿತು.
ಲಕ್ಷ್ಮೇಶ್ವರ: ಹನುಮ ಜಯಂತಿ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಮೂಹಿಕ ಗದಾಪೂಜೆ Gadapuja ನೆರವೇರಿಸಲಾಯಿತು.
ಶ್ರೀ ಹನುಮ ಜಯಂತಿ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 850ಕ್ಕೂ ಅಧಿಕ ಸ್ಥಳಗಳಲ್ಲಿ ಹಾಗೂ 25 ಜಿಲ್ಲೆಗಳಲ್ಲಿ ಸಾಮೂಹಿಕ ಗದಾಪೂಜೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದಲ್ಲಿಯೂ ಗದಾಪೂಜೆ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರ ಪಠಣ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ಸಾಮೂಹಿಕ ಜಪ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಲಾಯಿತು. ಸಮಿತಿಯು ಕಳೆದ 4 ವರ್ಷಗಳಿಂದ ಸಾಮೂಹಿಕ ಗದಾಪೂಜೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದೆ.
ಸುಮಾ ಕುಂಬಾರ, ಶಾಂತಾ ಹುಲಕೋಟಿ, ಗೀತಾ ಬಡಿಗೇರ, ಶಿವಾನಂದ ಹುಲಕೋಟಿ, ವಿಜಯಲಕ್ಷ್ಮೀ ಕಲ್ಲನಗೌಡರ, ರವಿ ನಂದಿ, ಜಯಶ್ರೀ ಹೆಬಸೂರು, ಸುಜಾತಾ ದೊಡ್ಡಮನಿ ಇತರರಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಹಿಂದೂ ಮುಖಂಡರು ಇದ್ದರು.