ನರಗುಂದ ತಾಲೂಕಿನ ಶಿರೋಳದ ಶ್ರೀ ಮಾದಾರ ಚನ್ನಯ್ಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಹನಮವ್ವ ಹಿರೇಮನಿ, ಶೇಖರಯ್ಯ ನಾಗಲೋಟಿಮಠ ಇತರರಿದ್ದರು. 
ಗದಗ

Mahaparinirvana: ಸಮ ಸಮಾಜ ನಿರ್ಮಿಸಿದ ಅಂಬೇಡ್ಕರ್

ನರಗುಂದ: ಮೇಲು-ಕೀಳು, ಅಸ್ಪಶ್ಯತೆ, ತಾರತಮ್ಯ ದೂರಮಾಡಿ ಸಮ-ಸಮಾಜ ನಿರ್ಮಾಣ ಮಾಡಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.
ಶ್ರೀಮಾದಾರ ಚನ್ನಯ್ಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಶಿರೋಳ ದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ(mahaparinirvana) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸ್ತ್ರೀ ಸಮಾನತೆ, ಸ್ತ್ರೀ ಶಿಕ್ಷಣದೊಂದಿಗೆ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂದು ಪ್ರತಿಪಾದಿಸಿದರು. ಸರ್ ಸಿದ್ದಪ್ಪ ಕಂಬಳಿ ಅವರೊಂದಿಗಿನ ಉತ್ತಮ ಒಡನಾಟ ಹೊಂದಿದ್ದ ಅಂಬೇಡ್ಕರ್ ಅವರು ಬುದ್ಧ, ಬಸವೇಶ್ವರರ ತತ್ವಾದರ್ಶಗಳಿಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲಿ ಅಡಗಿಸಿ ಜಗತ್ತಿಗೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಹನಮವ್ವ ಹಿರೇಮನಿ, ಶೇಖರಯ್ಯ ನಾಗಲೋಟಿಮಠ, ನಿವೃತ್ತ ಶಿಕ್ಷಕ ವಿ.ಕೆ. ಮರೆಗುದ್ದಿ, ಬಸಣ್ಣ ಕುಪ್ಪಸ್ತ, ಗೂಡುಸಾಬ ಯಲಿಗಾರ, ಬಸಣ್ಣ ಗಡ್ಡಿ, ಯಂಕಪ್ಪ ಶಾಂತಗೇರಿ, ಪ್ರಕಾಶಗೌಡ ತಿರಕನಗೌಡ್ರ, ಬಾಲು ಮೂಲಿಮನಿ, ಶ್ರೀಧರ ಬೇವಿನಕಟ್ಟಿ, ಸೋಮಶೇಖರಪ್ಪ ಗೊರವರ, ಪ್ರಭುಲಿಂಗ ಶಿರಯಣ್ಣವರ, ಭೂಪತಿರಾಜ ಧೋತರದ, ಪ್ರೀತಿ ಹಂಚಿನಮಠ, ಕಾಳಮ್ಮ ಕಮ್ಮಾರ, ಮಲ್ಲಪ್ಪ ಸಂಗಳದ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ, ಗಂಗಾಧರ ಫಾರಗೆ ಇತರರಿದ್ದರು.
ಉಪನ್ಯಾಸಕ ಶಂಕರ ಕುಪ್ಪಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ದೊಡಮನಿ ನಿರೂಪಿಸಿದರು. ಪ್ರಾಚಾರ್ಯ ಬಸವರಾಜ ಸಾಲಿಮಠ ವಂದಿಸಿದರು.