ನರೇಗಲ್ಲ: ಮಡಿವಾಳ (madiwalas) ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಮಾ. 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಡಿವಾಳ ಸಮಾಜದ ಜಿಲ್ಲಾ ಉಪಾಧ್ಯಕ್ಷ ದ್ಯಾಮ್ಮಣ್ಣ ಮಡಿವಾಳರ ಹೇಳಿದರು.
ಸಮಿಪದ ತೋಟಗಂಟಿ ಗ್ರಾಮದಲ್ಲಿ ಸೋಮವಾರ ಹೋರಾಟದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾನಾಡಿದರು.
ರಾಜ್ಯದಲ್ಲಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಬೇಡಿಕೆ ಈಡೇರಿಕೆಗೆ ಸರ್ಕಾರಗಳು ಪ್ರಯತ್ನ ಮಾಡಲೇ ಇಲ್ಲ. ನಮಗೆ ಸಿಗಬೇಕಾದ ಪರಿಶಿಷ್ಟ ಜಾತಿಯ ಹಕ್ಕಿನಿಂದ ವಂಚಿತರಾಗಿದ್ದೇವೆ. ಪ್ರಬಲ ಜಾತಿಗಳು ಆಕ್ರಮಿಸಿಕೊಂಡು ನಮ್ಮನ್ನು ನಿರ್ಲಕ್ಷೃ ಮಾಡಿವೆ ಎಂದು ತಿಳಿಸಿದರು.
ಜಿಲ್ಲಾ ಯವ ಘಟಕದ ಅಧ್ಯಕ್ಷ ನಿಂಬಣ್ಣ ಮಡಿವಾಳರ ಮಾತನಾಡಿ, ಸರ್ಕಾರ ನಮ್ಮ ಹಕ್ಕನ್ನು ಕಸಿದುಕೊಂಡಿದೆ. ಆಹೋರಾತ್ರಿ ಪ್ರತಿಭಟನೆ ನಡೆಸಿ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಶಿವಪ್ಪ ಮಡಿವಾಳರ, ಆನಂದ ಮಡಿವಾಳರ, ವಿನೋದ ಮಡಿವಾಳರ, ಬಸಪ್ಪ ಮಡಿವಾಳರ, ನಿಂಗಬಸಪ್ಪ ಮಡಿವಾಳರ, ಮುತ್ತಪ್ಪ ಮಡಿವಾಳರ, ವೀರಪ್ಪ ಮಡಿವಾಳರ, ಅಶೋಕ ಮಡಿವಾಳರ, ಬಸಪ್ಪ ಮಡಿವಾಳರ, ಷಣ್ಮುಖಪ್ಪ ಮಡಿವಾಳರ, ಪರಸಪ್ಪ ಮಡಿವಾಳರ, ಆನಂದ ಮಡಿವಾಳರ.ಶಿವು ಮಡಿವಾಳರ, ಸುರೇಶ ಮಡಿವಾಳರ, ಪ್ರಭು ಮಡಿವಾಳರ, ಮಲ್ಲಿಕಾರ್ಜುನ ಮಡಿವಾಳರ ಇದ್ದರು.