ನರೇಗಲ್ಲ ಪಟ್ಟಣದ ಶ್ರೀಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಗ್ರಂಥಪಾಲಕರ ದಿನ ಆಚರಿಸಲಾಯಿತು. ಡಾ. ಕಲ್ಲಯ್ಯ ಹಿರೇಮಠ, ಭರತರಾಜ ಬಳ್ಳಾರಿ, ಎಸ್.ಬಿ. ಗೌಡರ, ಡಾ. ಸಂದೀಪಕುಮಾರ ಬಿ. ಇತರರು ಇದ್ದರು.
ನರೇಗಲ್ಲ: ಗ್ರಂಥಪಾಲಕ (Librarian) ಎಂದರೆ ಗ್ರಂಥಾಲಯಗಳನ್ನು ನಿರ್ವಹಿಸುವ ಮತ್ತು ಪುಸ್ತಕಗಳು ಹಾಗೂ ಮಾಹಿತಿ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕಾಪಾಡುವ ವೃತ್ತಿಪರರು. ಭಾರತದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನವಾದ ಆಗಸ್ಟ್ 12 ರಂದು ಆಚರಿಸಲಾಗುತ್ತದೆ ಎಂದು ನರೇಗಲ್ಲನ ಶ್ರೀಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕಲ್ಲಯ್ಯ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಉತ್ತಮ ಜ್ಞಾನ ಸಂಪಾದನೆಗೆ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ಅಂತಹ ಗ್ರಂಥಾಲಯಗಳನ್ನು ನಿರ್ವಹಿಸುವ ಗ್ರಂಥಪಾಲಕರನ್ನು ವಿದ್ಯಾರ್ಥಿಗಳು ಗೌರವದಿಂದ ಕಾಣಬೇಕು’ ಎಂದರು.
ಭರತರಾಜ ಬಳ್ಳಾರಿ, ಎಸ್.ಬಿ. ಗೌಡರ, ಡಾ. ಸಂದೀಪಕುಮಾರ.ಬಿ, ಡಾ. ಋಷಿಕೇಶ ಪವಾರ, ಡಾ. ನಿರುಪಾದಿ.ಕೆ, ಡಾ. ಡಿ.ಎಲ್.ಪವಾರ, ಗುರುಸ್ವಾಮಿ ಎಂ, ಬಿ.ಎಸ್. ಪಲ್ಲೇದ ಇತರರು ಇದ್ದರು. ಪುಂಡಲೀಕ ಮಾದರ ನಿರ್ವಹಿಸಿದರು.